Latest News

ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌‌: ಬೆದ್ರ ಇನ್ಸ್ಪೆಕ್ಟರ್ ಸಹಿತ ಸಾಧಕರಿಗೆ ಸನ್ಮಾನ, ವಿದ್ಯಾಭ್ಯಾಸಕ್ಕೆ ನೆರವು

Picture of Namma Bedra

Namma Bedra

Bureau Report

ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ಇದರ ಆಶ್ರಯದಲ್ಲಿ ನಡೆದ ಐದನೇ ಆವೃತ್ತಿಯ ಕಲ್ಲಮುಂಡ್ಕೂರು ಪ್ರೀಮಿಯರ್‌ ಲೀಗ್‌‌ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಸಹಿತ ಕೆಲವು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪಂದ್ಯಾಕೂಟದಲ್ಲಿ ಉಳಿಕೆಯಾದ ರೂ.25 ಸಾವಿರವನ್ನು ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗಾಗಿ ನೀಡಲಾಯಿತು.


ಮುಖ್ಯಮಂತ್ರಿ ಪದಕ ವಿಜೇತ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಕಲ್ಲಮುಂಡ್ಕೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸದಾನಂದ ಪೂಜಾರಿ, ದೈವಾರಾಧನೆ ಹಾಗೂ ಕೃಷಿ ಕ್ಷೇತ್ರದ ಸಾಧನೆಗಾಗಿ ವೆಂಕಪ್ಪ ಕೋಟ್ಯಾನ್, ಮೇಲ್ದಬೆಟ್ಟು ನಿಡ್ಡೋಡಿ,ಕಂಬಳ ಕ್ಷೇತ್ರದ ಸಾಧನೆಗಾಗಿ ರಾಮ ಸುವರ್ಣ ನಿಡ್ಡೋಡಿ, ಕಲಾ ಕ್ಷೇತ್ರದ ಸಾಧನೆಗಾಗಿ ಜಯ ಸುವರ್ಣ ನಿಡ್ಡೋಡಿ, ತುಳು ರಂಗಭೂಮಿಯ ಸಾಧನೆಗಾಗಿ ಸತೀಶ್ ಅಮೀನ್ ಕಲ್ಲಮುಂಡ್ಕೂರು ಹಾಗೂ ಕುಣಿತ ಭಜನೆಯ ಸಾಧನೆಗಾಗಿ ಅಶೋಕ ನಾಯ್ಕ ಕಳಸಬೈಲು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


‌ ಐದನೇ ಆವೃತ್ತಿಯ ಕಲ್ಲಮುಂಡ್ಕೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಓಂಕಾರ್ ಬಾಲಾಜಿ ತಂಡ ಪ್ರಥಮ, ಎನ್.ವೈ.ಬಿ.ಪ್ಯಾಂಧರ್ಸ್ ದ್ವಿತೀಯ, ನಮೋ ವಾರಿಯರ್ಸ್ ತೃತೀಯ ಹಾಗೂ ಕೆ.ಎಫ್.ಸಿ.ಕಟೀಲ್ ತಂಡ ಚತುರ್ಥ ಬಹಮಾನಗಳನ್ನು ಪಡಕೊಂಡಿತು.
ಪಂದ್ಯಾಟದಲ್ಲಿ ಉಳಿಕೆಯಾದ ರೂ.25 ಸಾವಿರವನ್ನು ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಸುಕುಮಾರ್ ಅಮೀನ್ ಅವರು ಪ್ರೌಢಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.


ಸಮಾರೋಪ ಸಮಾರಂಭದಲ್ಲಿ ಕಲ್ಲಮುಂಡ್ಕೂರು ಶ್ರೀ ಕ್ಷೇತ್ರ ದೈಲಬೆಟ್ಟುವಿನ ಆಡಳಿತ ಮೊಕ್ತೇಸರರಾದ ಜಯಪ್ರಕಾಶ್ ಪಡಿವಾಳ್, ಸರ್ವೋದಯ ಫ್ರೆಂಡ್ಸ್ ಗೌರವಾಧ್ಯಕ್ಷರಾದ ಸ್ಟ್ಯಾನಿ ಡಿಸೋಜ, ಸದಾನಂದ ಪೂಜಾರಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ನಂದೇಶ್ ಕೋಟ್ಯಾನ್, ಪ್ರಕಾಶ್ ಮಿರಾಂದ,ಸಂದೀಪ್ ಸುವರ್ಣ, ಸುಧಾಕರ ಪೂಜಾರಿ,ಗ್ರಾ.ಪಂ.ಸದಸ್ಯ ಗಿರೀಶ್ ಪೂಜಾರಿ, ಎನ್.ವೈ.ಬಿ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸರ್ವೋದಯ ಫ್ರೆಂಡ್ಸ್ ತಂಡದ ಖ್ಯಾತ ಆಟಗಾರರಾದ ಪ್ರಸನ್ನ ಆಚಾರ್ಯ, ನೀತು ಪಟ್ಟೆ, ಸಂದೀಪ್ ಹಾಗೂ ಹಿರಿಯ ವಾಲಿಬಾಲ್ ಆಟಗಾರ ಸನತ್ ಕುಮಾರ್ ಶೆಟ್ಟಿ ಅವರನ್ನು ಸರ್ವೋದಯ ಫ್ರೆಂಡ್ಸ್ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು