ಪೊಲೀಸ್ ಇಲಾಖೆಯಲ್ಲಿನ ದಕ್ಷ ಸೇವೆಗಾಗಿ ನೀಡಲಾಗುವ ಮುಖ್ಯಮಂತ್ರಿ ಪದಕ ಪ್ರಶಸ್ತಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಸ್ವೀಕರಿಸಿದ್ದಾರೆ.
ಉಭಯ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ‘ಸಿಂಗಮ್ ‘ ಎಂದೇ ಖ್ಯಾತರಾಗಿರುವ ಸಂದೇಶ್ ಪಿ.ಜಿ.ಅವರು ಪ್ರಸ್ತುತ ಮೂಡುಬಿದಿರೆಯ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಡುಬಿದಿರೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ರೈಮ್ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದ್ದು ಪ್ರತೀ ಗ್ರಾಮಗಳಲ್ಲೂ ಸಂದೇಶ್ ಅವರ ಭಯವಿದೆ.ಅದೇ ಕಾರಣದಿಂದಾಗಿ ಕ್ರೈಮ್ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುವುದು.
ಕಾನೂನು ಕೈಗೆತ್ತಿಕೊಳ್ಳುವವರಿಗೆ, ಕಳ್ಳರಿಗೆ,ವಂಚಕರಿಗೆ, ಸ್ತ್ರೀ ಪೀಡಕರಿಗೆ,ಪೆತ್ತಕಂಡುಗಳಿಗೆ,ಸರಗಳ್ಳರಿಗೆ ಸಿಂಹಸ್ವಪ್ನವಾಗಿರುವ ಸಂದೇಶ್ ಅವರು ಮೂಡುಬಿದಿರೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ.
ಇದೀಗ ಮುಖ್ಯಮಂತ್ರಿ ಪದಕ ಸ್ವೀಕರಿಸಿರುವುದು ಮೂಡುಬಿದಿರೆ ಜನತೆಗೆ ಸಂತಸ ತಂದಿದೆ.