ಮೂಡುಬಿದಿರೆ ಸಮೀಪದ ಲಾಡಿ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯ ಖತೀಬರಾದ ಫಾಯಿಝ್ ಫೈಝಿ ಖುತುಬಾ ನೆರವೇರಿಸಿ ಈದ್ ಸಂದೇಶ ನೀಡಿದರು.
ಪುರಸಭಾ ಸದಸ್ಯ ಇಕ್ಬಾಲ್ ಕರೀಮ್ ಅವರು ಈದ್ ಸಂದೇಶ ನೀಡಿ ‘ ಜಗತ್ತಿಗೆ ಒಳಿತಾಗಲಿ’ ಎಂದು ಹಾರೈಸಿದರು.
ಮೂಡುಬಿದಿರೆ ಮಸೀದಿ ಸದಸ್ಯ ಆರಿಸ್ ಮದನಿ,ಇರ್ಷಾದ್ ಎಮ್.ಎಲ್,ಹಸನ್ ಲಾಡಿ,ಬಶೀರ್ ಲಾಡಿ,ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
