ಪಡ್ಡಂದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯಲ್ಲಿ ಎರಡು ವರ್ಷಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದ ಅಶ್ರಫ್ ಫೈಝಿ ಅರ್ಕಾನ ಅವರನ್ನು ಬೀಳ್ಕೊಡುವ ಸಮಾರಂಭವು ಮಸೀದಿಯಲ್ಲಿ ನಡೆಯಿತು.
ಮಸೀದಿ ಕಮಿಟಿಯ ಅಧ್ಯಕ್ಷರಾದ ಇಸ್ಮಾಯಿಲ್ ಕೆ.ಪೆರಿಂಜೆ ಅವರು ಖತೀಬರ ಸೇವೆಯನ್ನು ಸ್ಮರಿಸಿ ಯಶಸ್ಸನ್ನು ಹಾರೈಸಿದರು.

ಮಾಜಿ ಅಧ್ಯಕ್ಷ ಜಲೀಲ್ ಪಿ.ಎಸ್, ಪಿ.ಪಿ.ಸಖಾಫಿ,ಯು.ಕೆ.ಮುಹಮ್ಮದ್ ಹಾಜಿ,ಅಬ್ದುಲ್ ರಹ್ಮಾನ್, ರಫೀಕ್ ಪಡ್ಡ,ಖಾಲಿದ್ ಪೂಲಾಬೆ,ಮಹಮೂದ್ ಪಿ.ಜೆ,ಅಬ್ದುಸ್ಸಲಾಮ್ ಶಾಂತಿನಗರ,ಇದ್ರೀಸ್ ಪೂಲಾಬೆ, ಅಶ್ರಫ್ ಗಾಂಧಿನಗರ, ಅಶ್ರಫ್ ಕಿರೋಡಿ,ಯು.ಕೆ.ಇರ್ಫಾನ್, ಪಿ.ಎ.ಅಬ್ದುಲ್ ರಹ್ಮಾನ್, ಪತ್ರಕರ್ತ ಎಚ್.ಮುಹಮ್ಮದ್ ವೇಣೂರು, ಇಸ್ಮಾಯಿಲ್ ಎಚ್ .ಪೊಟ್ರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.