ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆಯ ವತಿಯಿಂದ 134 ನೇ ಅಂಬೇಡ್ಕರ್ ಜಯಂತಿ ಎ.20 ರಂದು ಮಧ್ಯಾಹ್ನ 3 ಗಂಟೆಗೆ ಮೂಡುಬಿದಿರೆಯ ತಾಲೂಕು ಕಚೇರಿ ವಠಾರದಲ್ಲಿ ನಡೆಯಲಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ವರ್ತೂರು ಮಂಜುನಾಥ್ ಅವರು ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ ಸಾಮಾನ್ಯ ಜನರಿಗೆ ಸಮಾನ ನ್ಯಾಯ ಸಿಗಬೇಕು,ನಮ್ಮ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಸದೃಢಗೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ,ಅಂಬೇಡ್ಕರ್ ಜಯಂತಿ ಆಚರಣೆಗೆ ಅರ್ಥ ಬರಲಿ ಎನ್ನುವ ಉದ್ದೇಶದಿಂದ ಈಗಾಗಲೇ ಬೆಳುವಾಯಿ ಹಾಗೂ ಅಲಂಗಾರು ಪ್ರದೇಶದಲ್ಲಿ ಅಶಕ್ತ ಕುಟುಂಬದ ಮನೆಗಳಿಗೆ ನೆರವಾಗಿದ್ದೇವೆ,ಮುಂದಿನ ದಿನಗಳಲ್ಲಿ ಅಂತಹ ಮನೆಗಳ ಪಟ್ಟಿ ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಡುವ ಸಂಕಲ್ಪ ಹೊಂದಿದ್ದೇವೆ ‘ ಎಂದರು.
ಎ.20 ರಂದು ಮಧ್ಯಾಹ್ನ ತಾಲೂಕು ಕಚೇರಿ ವಠಾರದಿಂದ ಬೈಕ್ ರ್ಯಾಲಿ,ಮೆರವಣಿಗೆ ನಡೆಯಲಿದ್ದು ಆ ಬಳಿಕ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ, ಮೂಡುಬಿದಿರೆ ತಹಶಿಲ್ದಾರ್ ಶ್ರೀಧರ ಮುಂದಲಮನಿ ಅವರ ಉಪಸ್ಥಿತಿಯಲ್ಲಿ, ಹಲವು ಮುಖಂಡರ ಪಾಲ್ಗೊಳ್ಳುವಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಚಿಂಗ,ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್ ಎಸ್, ಉಪಾಧ್ಯಕ್ಷರಾದ ರಂಜಿತ್ ಕುಮಾರ್,ಸುಧೀರ್, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
