ಕಾಶಿಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಹಿದಾಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ಶಾಖೆಯ ವತಿಯಿಂದ ಸಮಸ್ತ ನೂರನೇ ವಾರ್ಷಿಕ ಮಹಾ ಸಮ್ಮೇಳನ ಪ್ರಯುಕ್ತ ಉಚಿತ ಬ್ಯಾಗ್ ಗಳನ್ನು ವಿತರಿಸಲಾಯಿತು.
ಮಸೀದಿಯ ಖತೀಬರಾದ ಎಸ್.ಎ.ಅಬೂಬಕ್ಕರ್ ನಿಝಾಮಿ,ಸದರ್ ಮುಅಲ್ಲಿಮ್ ಅಕ್ಬರ್ ಅಲಿ ಅಝ್ಹರಿ,ಜಮಾತ್ ಕಮಿಟಿ ಅಧ್ಯಕ್ಷ ಕೆ.ಎಸ್.ಪುತ್ತುಮೋನು, ಕಾರ್ಯದರ್ಶಿ ಪಿ.ಎಚ್.ಅಬ್ದುಲ್ ರಹ್ಮಾನ್,ಕೋಶಾಧಿಕಾರಿ ಕೆ.ಎಸ್.ಇಸ್ಮಾಯಿಲ್, ಎಸ್.ಕೆ.ಎಸ್.ಎಸ್.ಎಫ್ ಶಾಖಾಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಹದ್,ಸದಸ್ಯರಾದ ಕೆ.ಎಸ್.ಆಬಿದ್,ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





