ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎನ್.ಎಚ್.ಎ.ಐ ಹಾಗೂ ದಿಲಿಪ್ ಬಿಲ್ಡ್ ಕಾನ್ ಲಿ.ವತಿಯಿಂದ ರಾ.ಹೆ.ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಎನ್.ಎಚ್.ಎ.ಐ ಪ್ರಾಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ , ಡಿಬಿಎಲ್ ಜನರಲ್ ಮ್ಯಾನೇಜರ್ ಟಿ.ರಾಘವ ರಾವ್,ಟೀಮ್ ಲೀಡರ್ ಸುರೇಂದ್ರ ಪಟ್ಟಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






ಸಸಿಗಳನ್ನು ನೆಟ್ಟು ಮಾತನಾಡಿದ ಅಬ್ದುಲ್ ಜಾವೆದ್ ಅವರು ” ಈ ಹಸಿರಿನ ಹೆಜ್ಜೆಗಳು ನಾಳಿನ ಪರಿಸರದ ಭದ್ರತೆಗೆ ದಾರಿಯಾಗಲಿದೆ ” ಎಂದರು.






