ಮಂಗಳೂರಿನ ‘MP-MLA’S NEWS TV ಪ್ರಸ್ತುತ ಪಡಿಸುವ ಹದಿಮೂರನೇ ವರ್ಷದ ಸೌಹಾರ್ದ ಸಂಗಮ ಕಾರ್ಯಕ್ರಮವು ಇಂದು ಸಂಜೆ 4 ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಖ್ಯಾತ ಮಕ್ಕಳ ತಜ್ಞ, ಮೂಡುಬಿದಿರೆ ಮೂಲದ ಡಾ.ಸುಧಾಕರ ಶೆಟ್ಟಿ ಅವರಿಗೆ ‘ ಸಮಾಜರತ್ನ’ ಪ್ರಶಸ್ತಿ ಸಹಿತ ಹಲವು ಗಣ್ಯರಿಗೆ ಬೇರೆ ಬೇರೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವೂ ಜರಗಲಿದೆ.

ಮಾಜಿ ಮೇಯರ್ ದಿವಾಕರ್ ಕದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ,ಡಾ.ಎ.ಸದಾನಂದ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರಿಗೆ ‘ಜನಸೇವಾ ಪ್ರಶಸ್ತಿ’, ಡಾ.ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ,ಮಿತ್ರಂಪಾಡಿ ಜಯರಾಮ ರೈ ಅವರಿಗೆ ‘ಕರುನಾಡ ರತ್ನ’ ಪ್ರಶಸ್ತಿ, ಡಾ.ಸುಧಾಕರ ಶೆಟ್ಟಿ ಅವರಿಗೆ ‘ಸಮಾಜ ರತ್ನ’ ಪ್ರಶಸ್ತಿ, ಡಾ.ರೋಹನ್ ಮೊಂತೇರೋ ಅವರಿಗೆ ‘ಉದ್ಯಮ ರತ್ನ’ ಪ್ರಶಸ್ತಿ ,ಡಾ.ಶ್ರೀರಾಮ್ ಭಟ್ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ ,ಡಾ.ಅನುರಾಗ್ ಜೆ.ಶೆಟ್ಟಿ ಅವರಿಗೆ ‘ ಬೆಸ್ಟ್ ಡಾಕ್ಟರ್ ಎವಾರ್ಡ್’ ಹಾಗೂ ಗಂಗಾಧರ ಕರಿಯ ಪಂಡಿತ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಭಾ ಕಾರ್ಯಕ್ರಮದ ಬಳಿಕ ರವೀಂದ್ರ ಪ್ರಭು ಮತ್ತು ಬಳಗದವರಿಂದ ‘ರಾಗ್ ರಂಗ್’ ಸಂಗೀತ ರಸಮಂಜರಿ ಹಾಗೂ ದಿನೇಶ್ ಅತ್ತಾವರ ಅವರ ನಿರ್ದೇಶನದಲ್ಲಿ ಹಾಡು ನಾಟಕಗಳ ಸಮ್ಮಿಶ್ರಣ ‘ ಯುವ ಜಾಗೃತಿ’ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು MP- MLA ‘S ಸಂಪಾದಕ ಡಾ.ಅಶೋಕ್ ಶೆಟ್ಟಿ ಬಿ.ಎನ್.ಅವರು ತಿಳಿಸಿದ್ದಾರೆ.










