ಬ್ಲೈಂಡ್ ವಿಂಕ್ ಸಂಸ್ಥೆ ಕೊಡಮಾಡುವ ‘ಇಂಡಿಯಾ ಎಕ್ಸಲೆನ್ಸ್ ಅವಾರ್ಡ್- 2024 ‘ ಕ್ಕೆ ಮೂಲ್ಕಿಯ ಶಾರದಾ ಅಸೋಸಿಯೇಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್, ಇಂಜಿನಿಯರ್ ಜೀವನ್ ಕೆ.ಶೆಟ್ಟಿ ಅವರು ಭಾಜನರಾಗಿದ್ದಾರೆ.
Best Integrated design & build firm for Extravagant & Iconic Construction in Karnataka ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರು ಪಂಚತಾರಾ ಹೊಟೇಲಿನಲ್ಲಿ ನಡೆದ ಇಂಟರ್ ನ್ಯಾಶನಲ್ ಇವೆಂಟ್ ನಲ್ಲಿ ಖ್ಯಾತ ಬಾಲಿವುಡ್ ತಾರೆ ಅಮೃತರಾವ್ ಅವರು ಪ್ರಧಾನಿಸಿದರು.

ಜೀವನ್ ಶೆಟ್ಟಿ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮತ್ತು ಮಾಸ್ಟರ್ ಡಿಗ್ರಿ ಪಡೆದು 1996 ರಲ್ಲಿ ಸ್ಥಾಪನೆಗೊಂಡ ಶಾರದಾ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಆಡಿಟೋರಿಯಂ, ಬಹುಮಹಡಿ ಕಟ್ಟಡ, ವಿಲ್ಲಾ,ದೇವಸ್ಥಾನ, ಕಚೇರಿಗಳ ವಿನ್ಯಾಸ ಹಾಗೂ ಕಟ್ಟಡ ನಿರ್ಮಾಣ ಮಾಡಿದ ಅನುಭವ ಮತ್ತು ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ.