ಜಿಲ್ಲೆಯ ವಾದ್ಯಕಲಾವಿದರ ನಡುವೆ ‘ಸಪ್ತಸ್ವರ ಪ್ರೀಮಿಯರ್ ಲೀಗ್’ ಎಂಬ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ನಾಳೆ ಕಲ್ಲಮುಂಡ್ಕೂರಿನ ಸರ್ವೋದಯ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಪ್ರಥಮ ಬಾರಿಗೆ ಕಲ್ಲಮುಂಡ್ಕೂರಿನ ಪ್ರಜ್ವಲ್,ಅಕ್ಷಿತ್,ಕಿರಣ್ ಅಶ್ವತ್ಥಪುರ,ಮನೋಜ್ ಹಾಗೂ ಆನಂದ ಅವರು ಈ ಪಂದ್ಯಾಕೂಟವನ್ನು ಆಯೋಜಿಸಿದ್ದಾರೆ.
ಇತರ ಲೀಗ್ ನಂತೆ ಇಲ್ಲೂ ಐಕಾನ್, ಕ್ಯಾಪ್ಟನ್ ಎಂದು ಆಯ್ಕೆ ಮಾಡಲಾಗಿದ್ದು ಪಂದ್ಯವು ವಿಜೃಂಭಣೆಯಿಂದ ನಡೆಯಲಿದೆ. ಜಿಲ್ಲೆಯ ವಾದ್ಯಕಲಾವಿದರು ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.













