ಸರಕಾರಿ ಸ್ಥಳದಲ್ಲಿ ಪಾರ್ಕಿಂಗ್ ಗೆ ಅಡ್ಡಿ: ವಾಣಿಜ್ಯ ಸಂಕೀರ್ಣ ವಿರುದ್ಧ ದೂರು

Picture of Namma Bedra

Namma Bedra

Bureau Report

ಮೂಡುಬಿದಿರೆಯ ಸರಕಾರಿ ಜಾಗದಲ್ಲಿ ಸಾರ್ವಜನಿಕ ವಾಹನಗಳನ್ನು ಪಾರ್ಕಿಂಗ್ ಮಾಡುವ ವೇಳೆ ಖಾಸಗಿ ವಾಣಿಜ್ಯ ಸಂಕೀರ್ಣದವರು ಅಡ್ಡಿಪಡಿಸಿ ತೊಂದರೆ ನೀಡಿದ ಬಗ್ಗೆ ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿಯವರಿಗೆ ದೂರು ನೀಡಲಾಗಿದೆ.
ಗುರುವಾರ ರಾತ್ರಿ ಇಲ್ಲಿನ ‘ಲೈಫ್ ಸ್ಟೈಲ್ ‘ ಒಂದರ ಎದುರು ವ್ಯಕ್ತಿಯೊಬ್ಬರು ತನ್ನ ವಾಹನವನ್ನು ಪಾರ್ಕಿಂಗ್ ಮಾಡಿದ್ದರು.ಅದು ಸರಕಾರಿ ಜಾಗ.ಆದರೂ ವಾಣಿಜ್ಯ ಸಂಕೀರ್ಣದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ‘ ಇಲ್ಲಿ ವಾಹನ ಪಾರ್ಕಿಂಗ್ ಮಾಡಬಾರದು’ ಎಂದು ಅಡ್ಡಿಪಡಿಸಿದ್ದಾರೆ. ‘ ಇದು ನಿಮ್ಮ ಜಾಗವಲ್ಲ, ಸರಕಾರಿ ಜಾಗ’ ಎಂದರೂ ಆ ವಾಣಿಜ್ಯ ಸಂಕೀರ್ಣದವರು ಅದನ್ನು ಕೇಳದೆ ಆ ವ್ಯಕ್ತಿಗೆ ಕಿರಿಕಿರಿ ಮಾಡಿದ್ದಾರೆ.
ಇದೇ ರೀತಿಯ ಆರೋಪಗಳು ಇನ್ನು ಕೆಲವು ಖಾಸಗಿ ವಾಣಿಜ್ಯ ಸಂಕೀರ್ಣದವರ ಮೇಲೆಯೂ ಕೇಳಿಬರುತ್ತಿದೆ.ಅವರೆಲ್ಲಾ ತಮ್ಮ ಸಂಕೀರ್ಣದೆದುರಿನ ಜಾಗವನ್ನು ತಮ್ಮದೇ ಜಾಗವೆಂದು ತಿಳಿದುಕೊಂಡಿದ್ದಾರೆ. ಸರಕಾರಿ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಅದನ್ನು ಕೇಳಲು,ಕಿರಿಕಿರಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರ್ಯಾರು ?;ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಈ ಬಗ್ಗೆ ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿಯವರಿಗೆ ದೂರು ನೀಡಲಾಗಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ, ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರಾದ ಶೌಕತ್ ಬೆಳುವಾಯಿ ಹಾಗೂ ಹರೀಶ್ ನೆಲ್ಲಿಕಾರ್, ಸಂತೋಷ್ ಶೆಟ್ಟಿ, ಹಫೀಝ್ ತೋಡಾರ್ ದೂರು ನೀಡುವ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top