ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ರಲ್ಲಿ 603 ಅಂಕಗಳನ್ನು ಪಡೆದು ರಾಜ್ಯಕ್ಕೂ, ಸಮುದಾಯಕ್ಕೂ,ವಿದ್ಯಾಸಂಸ್ಥೆಗೂ ಕೀರ್ತಿ ತಂದಿರುವ ಮಂಗಳೂರಿನ ಖ್ಯಾತ ಉದ್ಯಮಿ ಅದ್ದು ಹಾಜಿ ಅವರ ಮೊಮ್ಮಗಳಾದ ಫಾತಿಮಾ ರಫೀದಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ಮುಸ್ಲಿಂ ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕಾಶಿಪಟ್ಣ ದಾರುನ್ನೂರ್ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ , ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್,ದಾರುನ್ನೂರ್ ಮಂಗಳೂರು ಕಮಿಟಿಯ ಕಾರ್ಯದರ್ಶಿ ಜಲೀಲ್ ಎಫ್.ಎ, ದಾರುನ್ನೂರ್ ಉಪಾಧ್ಯಕ್ಷ ಅದ್ದು ಹಾಜಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.














