ರಾಷ್ಟ್ರೀಯ ಹೆದ್ದಾರಿ 169(13) ಸಾಣೂರು -ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಭೂಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್ ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮವು ನಾಳೆ (ಬುಧವಾರ) ಬೆಳಿಗ್ಗೆ 10-30ಕ್ಕೆ ಮೂಡುಬಿದಿರೆ ತಾಲೂಕು ಆಡಳಿತ ಸೌಧ ಕಚೇರಿಯ ಸಭಾಭವನದಲ್ಲಿ ನಡೆಯಲಿದೆ.
ಪರಿಹಾರಕ್ಕಾಗಿ ಕ್ಲೈಮ್ ಸಲ್ಲಿಸಲು ಮತ್ತು ಕ್ಲೈಮ್ ಸಲ್ಲಿಸಿದ ಭೂಮಾಲೀಕರಿಗೆ ಪರಿಹಾರ ಪಡೆದುಕೊಳ್ಳಲು ಈ ಅದಾಲತ್ ನಲ್ಲಿ ಅವಕಾಶವಿದ್ದು ಪುತ್ತಿಗೆ,ಮಾರ್ಪಾಡಿ,ಪಡುಮಾರ್ನಾಡು,ತೆಂಕಮಿಜಾರು, ಬಡಗಮಿಜಾರು ಹಾಗೂ ತೋಡಾರು ಗ್ರಾಮಗಳ ಭೂಮಾಲೀಕರು ಈ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಾ.ಹೆ -169(13) ಮಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧೀಕಾರಿ ಮುಹಮ್ಮದ್ ಇಸಾಕ್ (ಕೆ.ಎ.ಎಸ್.)ಅವರು ತಿಳಿಸಿದ್ದಾರೆ.






