‘ನೀವು ಸೀನಿಯಾರಿಟಿ ಪ್ರಕಾರ ಫೈಲ್ ವಿಲೇವಾರಿ ಮಾಡಿ,ಯಾರೋ ಬ್ರೋಕರ್ ಬಂದು ಮಧ್ಯದಲ್ಲಿ ಫೈಲ್ ನೀಡಿದಾಗ ಹಿಂದೆ ಇದ್ದ ಫೈಲ್ ಗಳನ್ನು ಅಡಿಗೆಹಾಕಿ ಜನಸಾಮಾನ್ಯರಿಗೆ ತೊಂದರೆ ನೀಡಬೇಡಿ, ಬ್ರೋಕರ್ ಗಳ ಕಾರಲ್ಲಿ ಹೋಗಿ ಸೈಟ್ ಇನ್ಸ್ಪೆಕ್ಷನ್ ಗೆ ಹೋಗಿ ಕಚೇರಿಗೆ ಬಂದ ಸಾಮಾನ್ಯರನ್ನು ದಿನವಿಡೀ ಕಾಯುವಂತೆ ಮಾಡಬೇಡಿ’ ..
ಹೀಗೆ ಅಧಿಕಾರಿಗಳ ವಿರುದ್ಧ ಗುಡುಗಿದವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ.
ಬುಧವಾರದಂದು ಮೂಡಾ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಕೆಲವೊಂದು ಅವ್ಯವಸ್ಥೆಗಳನ್ನು ಕಂಡು ಹೊಸದಾಗಿ ಬಂದಿದ್ದ ಅಧಿಕಾರಿಯವರೆದುರು ಈ ರೀತಿಯಾಗಿ ಇಲ್ಲಿನ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.
ಫೈಲ್ ಗಳನ್ನು ಕ್ರಮಪ್ರಕಾರವಾಗಿ ವಿಲೇವಾರಿ ಮಾಡಬೇಕು,ಅದುಬಿಟ್ಟು ಯಾವನೋ ಬ್ರೋಕರ್ ನ ಕೆಲಸ ಮೊದಲು ಮಾಡಿ ಹಿಂದೆ ಬಂದಿದ್ದ ಫೈಲ್ ಗಳನ್ನು ಕೊಳೆಯುವಂತೆ ಮಾಡದಿರಿ ,ನಿಮ್ಮ ಈರೀತಿಯ ಕರ್ತವ್ಯದಿಂದಾಗಿ ಮೂಡಾ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ಬರುವಂತಾಗುತ್ತದೆ, ಕಚೇರಿಗೆ ಬರುವ ಜನಸಾಮಾನ್ಯರಿಗೆ ಇದೆಲ್ಲಾ ಅರ್ಥವಾಗಲ್ಲ,ಅವರು ಬೇರೆಯೇ ಅಂದುಕೊಂಡು ಸರಕಾರವನ್ನು ದೂರುತ್ತಾರೆ,ನಿಮ್ಮ ಕರ್ತವ್ಯಲೋಪದಿಂದಾಗಿ ಸರಕಾರವನ್ನು ದೂರುವಂತೆ ಮಾಡದಿರಿ,ಬ್ರೋಕರ್ ಗಳ ಹಾವಳಿಯನ್ನೂ ನಿಯಂತ್ರಿಸಿ ಎಂದು ಒತ್ತಾಯಿಸಿದ್ದಾರಲ್ಲದೆ ಎಲ್ಲ ಫೈಲ್ ಗಳ ಬಗ್ಗೆಯೂ ಅಧ್ಯಕ್ಷರ ಗಮನಕ್ಕೆ ತರಬೇಕು,ಪ್ರಾಮಾಣಿಕ ಅಧ್ಯಕ್ಷರಿದ್ದಾರೆ ,ಅವರ ಪ್ರಾಮಾಣಿಕತೆಯನ್ನು ದುರ್ಬಳಕೆ ಮಾಡಬೇಡಿ ಎಂದೂ ಎಚ್ಚರಿಸಿದ್ದಾರೆ.






