ಅಲಂಗಾರು ಚರ್ಚ್ ಧರ್ಮಗುರುಗಳಾದ ರೆ.ಫಾ.ಮೆಲ್ವಿನ್ ನೊರೊನ್ಹ ಅವರ ತಾಯಿ ಲೀನಾ ನೊರೊನ್ಹ (79) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ತಾಕೊಡೆಯ ದಿ.ಪೀಟರ್ ನೊರೊನ್ಹ ಅವರ ಪತ್ನಿಯಾಗಿರುವ ಲೀನಾ ನೊರೊನ್ಹ ಅವರು ರೆ.ಫಾ.ಮೆಲ್ವಿನ್ ನೊರೊನ್ಹ ಸಹಿತ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೆಲ್ವಿನ್ ನೊರೊನ್ಹ ಅವರು ಖ್ಯಾತ ಧರ್ಮಗುರುಗಳಾಗಿದ್ದು ಪ್ರಸ್ತುತ ಅಲಂಗಾರು ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಗೈಯುತ್ತಿದ್ದಾರೆ.
ಆ.10 ರಂದು ಸಂಜೆ ಮೂರು ಗಂಟೆಯಿಂದ ಮೃತರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.4 ಗಂಟೆಗೆ ತಾಕೊಡೆ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.










