ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೀಷನ್ ನಲ್ಲಿ ಅನೀಶ್ ಅವರ ಸಾರಥ್ಯದ ಮೂಡುಬಿದಿರೆಯ ಎಂ.ಜೆ
ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಸುಮಾರು ಮೂವತ್ತಾರು ತಂಡಗಳು ಭಾಗವಹಿಸಿದ್ದ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಎಂ.ಜೆ.ಸ್ಟೆಪ್ ಅಪ್ ನ 13 ವಿದ್ಯಾರ್ಥಿಗಳು ಭಾಗವಹಿಸಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಮತ್ತು ತಂಡದ ಮುಖ್ಯಸ್ಥ ಅನೀಶ್ ಅವರನ್ನು ಎಂಜೆ.ಸ್ಟೆಪ್ ಅಪ್ ನ ಎಲ್ಲ ಶಾಖೆಗಳ ವಿದ್ಯಾರ್ಥಿಗಳು, ಪೋಷಕರು ಅಭಿನಂದಿಸಿದ್ದಾರೆ.







































