ಆಗಸ್ಟ್ 8 ರಂದು ಪಡುಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರ ಪತ್ನಿ ವಿಜಯಾ ಎಂಬವರು ಮೂಡುಬಿದಿರೆಯಲ್ಲಿ ಎರಡು ಬಳೆ ,ಚಿನ್ನದ ಸರ ಸೇರಿ ಒಂಭತ್ತು ಪವನ್ ಚಿನ್ನವನ್ನು ಪರ್ಸ್ ಸಮೇತ ಕಳೆದುಕೊಳ್ಳುತ್ತಾರೆ.
ಅವರ ತಾಯಿಯ ಅಂತ್ಯಕ್ರಿಯೆಯು ಆ ದಿನ ಕುಪ್ಪೆಪದವಿನಲ್ಲಿ ನಡೆದಿದ್ದು ಆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವಾಗ ಮೂಡುಬಿದಿರೆಯಲ್ಲಿ ಘಟನೆ ನಡೆದಿತ್ತು.
ಅದೇ ದಿನ ಮೂಡುಬಿದಿರೆ ಪೊಲೀಸರಿಗೆ ದೂರು ನೀಡುತ್ತಾರೆ.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಎರಡೇ ದಿನಗಳ ಅಂತರದಲ್ಲಿ ಚಿನ್ನ ಪತ್ತೆಯಾಗುತ್ತದೆ.


ವಿಜಯಾ ಅವರು ಕಾರಿನಿಂದ ಇಳಿದು ಹೋಗುವಾಗ ಅವರು ಚಿನ್ನವನ್ನು ಕಳೆದುಕೊಂಡಿರುತ್ತಾರೆ.ಅದು ಅದೇ ರಸ್ತೆಯಲ್ಲಿ ಹೋಗುವವನೊಬ್ಬನಿಗೆ ಸಿಗುತ್ತದೆ. ಆತ ಪಾಪ ಅದನ್ನು ಮನೆಗೆ ಕೊಂಡುಹೋಗಿ ಅಮ್ಮನಲ್ಲಿ ಕೊಟ್ಟಿರ್ತಾನೆ. ಅಂತೂ ಪೊಲೀಸರ ಶ್ರಮದ ಫಲವಾಗಿ ಆ ಚಿನ್ನ ಪತ್ತೆಯಾಗುತ್ತದೆ.
ಎರಡೇ ದಿನಗಳ ಅಂತರದಲ್ಲಿ ಕಳೆದುಕೊಂಡ ಚಿನ್ನವನ್ನು ವಾರೀಸುದಾರರಿಗೆ ಒಪ್ಪಿಸುವಲ್ಲಿ ಮೂಡುಬಿದಿರೆ ಪೊಲೀಸರು ಯಶಸ್ವಿಯಾಗುತ್ತಾರೆ.
ಈ ಯಶಸ್ವೀ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮುಹಮ್ಮದ್ ಹುಸೇನ್,ಮುಹಮ್ಮದ್ ಇಕ್ಬಾಲ್, ಅಖಿಲ್ ಅಹಮದ್,ನಾಗರಾಜ ಲಮಾಣಿ,ವೆಂಕಟೇಶ್ ಅವರು ಪತ್ತೆ ಕಾರ್ಯದಲ್ಲಿ ಶ್ರಮಿಸಿದ್ದಾರೆ.


