ಕಲ್ಲಮುಂಡ್ಕೂರಿನಲ್ಲಿ ಮುಸುಕುಧಾರಿ ಕಳ್ಳರಿಂದ ದನಕಳ್ಳತನ!

Picture of Namma Bedra

Namma Bedra

Bureau Report

ದನಕಳ್ಳರ ಕಾರ್ಬಾರ್ ಮತ್ತೆ ಕಲ್ಲಮುಂಡ್ಕೂರಿನಲ್ಲಿ ನಡೆದಿದೆ. ಕಾರಿನಲ್ಲಿ ಬಂದ ಮುಸುಕುಧಾರಿ ನಾಯ್ದಮಕ್ಕಳು ಫ್ರೆಂಡ್ಸ್ ಕ್ಲಬ್ ಕಟ್ಟಡವೊಂದರ ಮಲಗಿದ್ದ ಎರಡು ದನಗಳನ್ನು ಕದ್ದೊಯ್ದಿದ್ದಾರೆ.
ಕಲ್ಲಮುಂಡ್ಕೂರಿನ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಟ್ಟಡದ ಬಳಿ ಮಲಗಿದ್ದ ಬಲರಾಮ್ ಎಂಬವರ ಎರಡು ದನಗಳನ್ನು ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಕಾರಿನಲ್ಲಿ ಬಂದ ಮುಸುಕುಧಾರಿಗಳು ಕಾರಿನಿಂದಿಳಿದು ಮಲಗಿದ್ದ ದನಗಳಿಗೆ ಏನೋ ತಿನ್ನಲು ನೀಡುತ್ತಾರೆ. ಬಳಿಕ ಆ ದನಗಳ ಕುತ್ತಿಗೆಗೆ ಹಗ್ಗ ಕಟ್ಟುತ್ತಾರೆ.ಬಳಿಕ ಕಾರಿಗೆ ಎತ್ತಿಹಾಕಿ ಕೊಂಡೊಯ್ಯುತ್ತಾರೆ.ಇದೆಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದಿರೆ ಕಡೆಯಿಂದ ಹೋಗಿದ್ದ ಕಾರು ಮತ್ತೆ ಅದೇ ದಾರಿಯಾಗಿ ಹಿಂತಿರುಗಿದೆ ಎನ್ನಲಾಗಿದೆ.
ಈ ದನಕಳ್ಳತನದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ಪತ್ತೆಗೆ ಒತ್ತಾಯಗಳು ಕೇಳಿ ಬರುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top