ತಾಲೂಕು ಮಟ್ಟದ ಕಬಡ್ಡಿ: ಅಳಿಯೂರು ಹೈಸ್ಕೂಲ್ ಬಾಲಕಿಯರ ತಂಡ ಪ್ರಥಮ

Picture of Namma Bedra

Namma Bedra

Bureau Report

ದ.ಕ.ಜಿ.ಪ.ಶಾಲಾ ಶಿಕ್ಷಣ ಇಲಖೆ,ಶಿಕ್ಷಣಾಧಿಕಾರಿ ಮೂಡುಬಿದಿರೆ ತಾಲೂಕು ಇದರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಳಿಯೂರು ಸರಕಾರಿ ಪ್ರೌಢಶಾಲಾ ತಂಡವು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ,ರಾಷ್ಟ್ರೀಯ ಕಬಡ್ಡಿ ತರಬೇತುದಾರ ,ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಭಾಸ್ಕರ ಪಾಲಡ್ಕ ಅವರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top