ಇರುವೈಲು ಫ್ರೆಂಡ್ಸ್ ಕ್ಲಬ್ ವತಿಯಿಂದ 14ನೇ ವರ್ಷದ ಗಣೇಶೋತ್ಸವ: ಸತೀಶ್ಚಂದ್ರ ಪಾಣಿಲ, ಸುಜಾತಾ ಜೆ.ಶೆಟ್ಟಿ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಇರುವೈಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಹದಿನಾಲ್ಕನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಇರುವೈಲು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಅಸ್ರಣ್ಣ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಹಾಗೂ ಇರುವೈಲು ದೇವಸ್ಥಾನದ ಅಧ್ಯಕ್ಷರಾದ ಸುಜಾತಾ ಜೆ.ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಪದ್ಮರಾಜ್ ರಾಮಯ್ಯ , ತಿಮ್ಮಯ್ಯ ಶೆಟ್ಟಿ, ವಿವೇಕ್ ಆಳ್ವ,ಚಂದ್ರಹಾಸ ಸನಿಲ್, ಅನೀಶ್ ಬೆಳುವಾಯಿ, ಶೇಖರ್ ಬೊಳ್ಳಿ,ಕುಮಾರ್ ಪೂಜಾರಿ,ವೆಂಕಟೇಶ್ ಪೂಜಾರಿ ಗುಜರಾತ್ ಮತ್ತಿತರರು ಭಾಗವಹಿಸಿದ್ದರು.
ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪೂಜಾರಿ ದೇವರಗುಡ್ಡೆ, ಕಾರ್ಯದರ್ಶಿ ಪ್ರಶಾಂತ್ ಅಮೀನ್ ,ಕೋಶಾಧಿಕಾರಿ ಕಿಶೋರ್ ಕುಮಾರ್, ಪದಾಧಿಕಾರಿಗಳಾದ ಪ್ರವೀಣ್,ಭರತ್ ಶೆಟ್ಟಿ, ದಿನೇಶ್ ಪ್ರಭು,ಪ್ರದೀಪ್ ಶೆಟ್ಟಿ, ಯಶೋಧರ್,ರಾಜ್ ಕುಮಾರ್,ಸಂತೋಷ್ ಪೂಜಾರಿ,ನಿತಿನ್, ಲೋಕೇಶ್ ಭಂಡಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top