ಶಿರ್ತಾಡಿಯಿಂದ ಬೆದ್ರವರೆಗೆ ಅದೆಷ್ಟು ‘ಮರಣಗುಂಡಿ’ಗಳು ??

Picture of Namma Bedra

Namma Bedra

Bureau Report

ಇದು ಮರಣ ಗುಂಡಿಗಳೇ. ಮಳೆಗಾಲದಲ್ಲಿ ಯಾರಿಗೂ ಗೊತ್ತಾಗಲಿಲ್ಲ… ಈಗ ಬರ್ಸ ಒಂತೆ ಕಡಿಮೆಯಾದ ಕೂಡಲೇ ನಮ್ಮ ರಸ್ತೆಗಳ ಪೌಡರ್ ಮಯಕ್ಕವಾಗಿ ಅಲ್ಲಲ್ಲಿ ಗುಳಿಕೆನ್ನೆಗಳು ಕಾಣಲು ಪ್ರಾರಂಭವಾಗಿದೆ.
ಶಿರ್ತಾಡಿಯಿಂದ ಮೂಡುಬಿದಿರೆಗೆ ಬರುವಾಗ ಅಥವಾ ಬೆದ್ರದಿಂದ ಶಿರ್ತಾಡಿ ಕಡೆಗೆ ಹೋಗುವಾಗ ಲೆಕ್ಕ ಮಾಡಿಕೊಂಡು ಹೋದರೆ ಐವತ್ತಕ್ಕಿಂತಲೂ ಹೆಚ್ಚು ಗುಂಡಿಗಳು ಕಾಣಸಿಗುತ್ತದೆ. ಇದು ದೊಡ್ಡ ವಾಹನಗಳಿಗೆ,ಜನಪ್ರತಿನಿಧಿಗಳ ವಾಹನಗಳಿಗೆ ಗೊತ್ತೇ ಆಗುವುದಿಲ್ಲ- ಚೆ ….ಎಂಚಿ ಗುಂಡಿ ಮಾರ್ರೆ ಅಂತ ಹೋಗುತ್ತಾರೆ.


ಇದರ ಅನುಭವವಾಗೋದು ದ್ವಿಚಕ್ರವಾಹನಗಳಿಗೆ ಮಾತ್ರ.ಗೊತ್ತಿದ್ದವರು ಹೇಗೂ ಸ್ಲೋ ಮಾಡಿಕೊಂಡು ಪಕ್ಕದಲ್ಲಿ ಹೋಗುತ್ತಾರೆ.ಹೊಸಬರು ಮಾತ್ರ ಈ ಗುಂಡಿಗಳಿಗೆ ತಮ್ಮ ಗಾಡಿಯ ಚಕ್ರಗಳು ಹೋದಾಗ ‘ ಅಯ್ಯಮ್ಮ’ಅಂತ ಹೇಳದೆ ಮುಂದೆ ಹೋಗಲು ಚಾನ್ಸೇ ಇಲ್ಲ.ಒಂದುವೇಳೆ ಸ್ವಲ್ಪ ಫಾಸ್ಟ್ ಹೋದಾಗ ಈ ಗುಂಡಿಗಳಿಗೆ ಬಿದ್ದರೆ ಅಪಾಯ ಗ್ಯಾರಂಟಿ.
ಮಂಗಳೂರಿನಲ್ಲಿ ಮಂಗಳವಾರ ಇದೇ ರೀತಿಯ ದುರಂತವೊಂದು ನಡೆದಿದೆ.ರಸ್ತೆ ಮಧ್ಯೆಯ ಹೊಂಡಕ್ಕೆ ಬಿದ್ದು ದ್ವಿಚಕ್ರ ವಾಹನ ಚಲಿಸಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಲ್ಲೂ ಇಂತಹ ಅಪಾಯ ಸಂಭವಿಸುವ ಮುನ್ನ ಪಂಚಾಯತ್ ಅಧಿಕಾರಿಗಳು,ಪುರಸಭಾಧಿಕಾರಿಗಳು ಎಚ್ಚೆತ್ತುಕೊಳ್ಳುವುದೊಳಿತು.ಪುರಸಭಾ ರಸ್ತೆಗಳೂ ತಮ್ಮ ಮೂಲಸ್ವರೂಪ ಕಳೆದುಕೊಂಡಿದೆ.ಪೇಟೆಯೊಳಗಿನ ರಸ್ತೆಗಳಲ್ಲೂ ಬಿರುಕುಬಿಟ್ಟು ಹೊಂಡಬಿದ್ದಿದೆ.


ಹಾಗಾಗಿ ಅಧಿಕಾರಿಗಳು ‘ಇಂದು’ ,ನಾಳೆ ಅಂತ ದಿನ ದೂಡದೆ ಕೂಡಲೇ ಈ ರಸ್ತೆಗಳ ಬಗ್ಗೆ ಗಮನಹರಿಸಿ ಅಪಾಯಕರ ಜೀವ ಉಳಿಸುವ ಕೆಲಸ ಮಾಡಬೇಕು.
ಗುಂಡಿಗಳ ವಿವರ ಹೀಗಿದೆ:
*ಶಿರ್ತಾಡಿ ಬಿಲ್ಲವ ಸಂಘದ ಹತ್ತಿರ ಜಾಯೆಲ್ ಸಿಕ್ವೇರ ಅವರ ಮನೆಯೆದುರು.
*ಶಿರ್ತಾಡಿ ಬ್ರಹ್ಮ ರೆಸಿಡೆನ್ಸಿ ಎದುರಿನ ರಸ್ತೆ.
*ಶಿರ್ತಾಡಿ ಸಂಕದ ಬಳಿ ನೀರಿನ ಸಂಪರ್ಕದ ಪೈಪ್ ಹಾಕಿದ ರಸ್ತೆ.
*ಕೋಟೆಬಾಗಿಲು ವೀರಮಾರುತಿ ಬಳಿಯ ರಸ್ತೆ
*ಕೋಟೆಬಾಗಿಲು ದೊಡ್ಡ ಮಸೀದಿಯೆದುರಿನ ರಸ್ತೆ
*ಜೈನಪೇಟೆ ಸಾವಿರ ಕಂಬ ಬಸದಿಯ ಎದುರಿನ ಟರ್ನ್
*ಬಸ್ಸು ನಿಲ್ದಾಣ ಬಳಿಯ ಅಗರಿ ಎದುರಿನ ರಸ್ತೆ.
ಹಾಗೂ ಇತರ ಕೆಲವೆಡೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top