ಇದೊಂದು ಹೊಂಡ ಗುಂಡಿಯ ರಸ್ತೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಬೇರೆ ವಾಹನಗಳಿಗೆ ಬಿಡಿ, ಟೂ ವೀಲರ್ಸ್ನಬರಿಗೂ ಬರಿಬರಿಟೆ ಹೋಗಲು ಕಷ್ಟವಾಗಿತ್ತು.


ಈಗ ಬರ್ಸ ಒಂತೆ ಕಡಿಮೆಯಾಗಿದೆ. ರಸ್ತೆಯ ಕ್ವಾಲಿಟಿ ದಾದ ಅಂತ ಊರವರಿಗೆ,ವಾಹನ ಸವಾರರಿಗೆ ಗೊತ್ತಾಗಿದೆ.ಇನ್ನು ಕಾದು ಕುಳಿತರೆ ಆಪಿನ ಪೋಪಿನ ವಿಷಯ ಅಲ್ಲ ಎಂದರಿತ ಊರ ಸೀನಿಯರ್- ಜೂನಿಯರ್ಸ್ ಸೇರಿಕೊಂಡು ,ಕೊಟ್ಟು ಪಿಕ್ಕಾಸು ಹಿಡ್ಕೊಂಡು ಬಂದು ತಾವೇ ದುರಸ್ತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕೆಲವೊಮ್ಮೆ ಎಲ್ಲದಕ್ಕೂ ಪಂಚಾಯತ್ ನವರನ್ನು, ಪಿಡಬ್ಲ್ಯೂ ನವರನ್ನು ಕಾದು ಕುಳಿತರೆ ಆಗಲಿಕ್ಕಿಲ್ಲ.ತಮ್ಮ ಊರಿನ ಅಭಿವೃದ್ಧಿಗೆ ತಮ್ಮದೂ ಒಂದು ಕೊಡುಗೆಯಿರಲಿ ಎನ್ನುವುದನ್ನು ಈ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಒಳ್ಳೇದಾಗಲಿ.






