ಬಡವನ ಆರೋಗ್ಯಕ್ಕೆ ನೆರವಾದ ಸಾಯಿ ಮಾರ್ನಾಡ್

Picture of Namma Bedra

Namma Bedra

Bureau Report

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೂಡುಮಾರ್ನಾಡು ಗ್ರಾಮದ ಬಿಜತೈಲ್ ಪರಿಸರದ ರಮೇಶ್ ಪೂಜಾರಿ ಎಂಬವರಿಗೆ ಸಾಮಾಜಿಕ ಸೇವಾ ಸಂಸ್ಥೆ ಪಡುಮಾರ್ನಾಡಿನ ಸಾಯಿ ಮಾರ್ನಾಡ್ ಸೇವಾ ಸಂಘವು ಆರ್ಥಿಕ ಸಹಾಯ ಮಾಡಿದೆ.
ಆರ್ಥಿಕವಾಗಿ ಹಿಂದುಳಿದಿರುವ ರಮೇಶ್ ಪೂಜಾರಿ ಅವರು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಇದೀಗ ಮನೆಯಲ್ಲೇ ಇದ್ದಾರೆ.ಮನೆಗೆ ಆಧಾರಸ್ತಂಭವಾಗಿದ್ದ ರಮೇಶ್ ಅವರು ಹೃದಯ ಕಾಯಿಲೆಯಿಂದ ಮನೆಯಲ್ಲಿದ್ದು ಹೆಂಡತಿಯೇ ಇವರನ್ನು ನೋಡಿಕೊಳ್ಳುತ್ತಾರೆ.ಎಂಟು ವರ್ಷದ ಹೆಣ್ಣು ಮಗುವಿದೆ. ಈ ಎಲ್ಲಾ ಅಸಹಾಯಕತೆಗಳನ್ನು ಮನಗಂಡ ಸಾಯಿ ಮಾರ್ನಾಡ್ ಅವರಿಗೆ 10 ಸಾವಿರ ರೂ.ಗಳ ಚೆಕ್ಕನ್ನು ನೀಡಿ ನೆರವಾಗಿದೆ.
ಸಾಯಿಮಾರ್ನಾಡ್ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top