ಗಂಟಾಲ್ಕಟ್ಟೆಯ ಮನೆಯೊಂದರ ಹಿಂದೆ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದಾರೆನ್ನುವ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ನೇತೃತ್ವದ ಪೊಲೀಸ್ ತಂಡವು ದಾಳಿ ನಡೆಸಿ 50 ಕೆ.ಜಿ.ದನದ ಮಾಂಸ ಮತ್ತು ಮೂರು ದನಗಳನ್ನು ವಶಪಡಿಸಿಕೊಂಡಿದೆ.

ಜಲೀಲ್ ಎಂಬವರ ಮನೆಯ ಹಿಂಭಾಗದ ಗುಡ್ಡದಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಗೋಮಾಂಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿತ್ತು.ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದು ಆರೋಪಿಗಳಾದ ಜಲೀಲ್,ಸಾಹಿಲ್ ಮತ್ತು ಆತನ ಮಗ ಸೊಹೇಲ್ ಹಾಗೂ ಕುದ್ರೋಳಿಯ ಮುಹಮ್ಮದ್ ಅಶ್ರಫ್ ಎಂಬವರು ಪರಾರಿಯಾಗಿದ್ದಾರೆ.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಎಸ್.ಐ.ಕೃಷ್ಣಪ್ಪ, ಅಪರಾಧ ವಿಭಾಗದ ಅಖಿಲ್ ಅಹಮದ್ ಹಾಗೂ ನಾಗರಾಜ್ ಅವರು ಪಾಲ್ಗೊಂಡಿದ್ದರು.






