ಪವರ್ ಮ್ಯಾನ್,ಪೌರ ಕಾರ್ಮಿಕರನ್ನು ಗೌರವಿಸಿ ಗಮನಸೆಳೆದ ಲಕ್ಸುರಿ ಲಿವಿಂಗ್‌!

Picture of Namma Bedra

Namma Bedra

Bureau Report

ಫರ್ನಿಚರ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಲಕ್ಸುರಿ ಲಿವಿಂಗ್ ನ ನೂತನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆಯ ಪವರ್ ಮ್ಯಾನ್ ಗಳನ್ನು, ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಲಕ್ಸುರಿ ಲಿವಿಂಗ್‌ ಸಂಸ್ಥೆ ಗಮನ ಸೆಳೆದಿದೆ.
ಮೆಸ್ಕಾಂ ನ ಪವರ್ ಮ್ಯಾನ್ ಗಳ ಸೇವೆ ಏನೆನ್ನುವುದು ಎಲ್ಲರಿಗೂ ಗೊತ್ತು. ರಾತ್ರಿ ಹಗಲೆನ್ನದೆ, ಮಳೆ,ಬಿಸಿಲು, ಚಳಿ ಎನ್ನದೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅವರ ಸೇವೆಯನ್ನು ಗುರುತಿಸುವವರು ಕಡಿಮೆ. ಅದೇ ರೀತಿ ಪೌರ ಕಾರ್ಮಿಕರ ಸೇವೆ ಕೂಡಾ ದೊಡ್ಡದು. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ನೂತನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಅದ್ಯಾರೋ ಧನಿಕರನ್ನು ಸನ್ಮಾನಿಸದೆ ಈ ಎರಡೂ ವೃತ್ತಿಯವರನ್ನು ಗುರುತಿಸಿ ಅವರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಲಕ್ಸುರಿ ಲಿವಿಂಗ್ ಗ್ರಾಹಕರ ಹಾಗೂ ಸಾರ್ವಜನಿಕರ ಮನಗೆದ್ದಿದೆ.
ನೂತನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿ ಅಬುಲ್ ಅಲಾ ಪುತ್ತಿಗೆ,ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಗಾಯಕ ಹಸನಬ್ಬ ಕಾಟಿಪಳ್ಳ,ನ್ಯಾಯವಾದಿ ಇರ್ಷಾದ್ ಎನ್.ಜಿ, ಉದ್ಯಮಿ ಹನೀಫ್ ರಹ್ಮಾನಿಯ, ಕೆನರಾ ಬ್ಯಾಂಕ್ ಮೆನೇಜರ್ ಶಿವಾನಂದ, ನಿವೃತ್ತ ಮುಖ್ಯ ಶಿಕ್ಷಕಿ ಪ್ರಫುಲ್ಲ ಎಂ.ಶೆಟ್ಟಿ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಆಂಡ್ರೂ ಡಿಸೋಜ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಪತ್ರಕರ್ತ ಅಶ್ರಫ್ ವಾಲ್ಪಾಡಿ,ಮಂಗಳ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಮೆನೇಜರ್ ಅಮಿತಾ ಪ್ರದೀಪ್,ಹನೀಫ್ ರಹ್ಮಾನಿಯ, ಆಂದ್ರಪ್ರದೇಶದ ಅಬ್ದುಲ್ ಖಾದರ್ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಹಮ್ಮಿಕೊಂಡಿದ್ದ ಲಕ್ಕಿ ಸ್ಕೀಮ್ ನ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬದ್ರುದ್ದೀನ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿ ಕೃತಜ್ಞತೆ ಸಲ್ಲಿಸಿದರು. ಸಮದ್ ಕಾಟಿಪಳ್ಳ ಅವರು ಎಲ್ಲ ಕಾರ್ಯಕ್ರಮಗಳ ನಿರೂಪಣೆಗೈದರು.
ಸಂಸ್ಥೆಯ ಮೆನೇಜರ್ ಹುಸೈನ್,ಸಹಾಯಕ ಮೆನೇಜರ್ ಅನ್ವರ್ ಲಾಡಿ, ಸಿಬ್ಬಂದಿಗಳಾದ ಸಿದ್ದಿಕ್ ಬಜ್ಪೆ,ಫಿದಾ, ಸಮೀರ,ಗುಲ್ಶಾನ್,ಸುಮಯ್ಯ,ತನಾಝ್,ಅಸ್ಮಿಯಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top