ಇದು ನಿನ್ನೆ ನಿಡ್ಡೋಡಿಯಲ್ಲಿ ನಡೆದ ಘಟನೆ. ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡವೊಂದು ಸಿಕ್ಕಿಬಿದ್ದಿದ್ದು ಸಂಭಾವ್ಯ ಗ್ಯಾಂಗ್ ರೇಪೊಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ಸಮಯ ಪ್ರಜ್ಞೆಯಿಂದ ತಪ್ಪಿ ಹೋಗಿದೆ.
ನಿಡ್ಡೋಡಿಯ ಮನೆಯೊಂದರಲ್ಲಿ ನಾಲ್ಕು ಮಂದಿ ಯುವಕರು ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗಿದ್ದಾರೆನ್ನುವ ಮಾಹಿತಿ ತಿಳಿದ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸ್ ತಂಡವು ಆ ಮನೆಗೆ ದಾಳಿ ನಡೆಸಿದೆ.
ಅಲ್ಲಿ ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರು ಇದ್ದರು.ಅವರೆಲ್ಲಾ ಗ್ಯಾಂಗ್ ರೇಪ್ ನ ಸಿದ್ಧತೆಯಲ್ಲಿದ್ದರೆನ್ನುವುದು ಪೊಲೀಸರಿಗೆ ಗೊತ್ತಾಗಿದೆ.ಅಲ್ಲದೆ ಲೈಂಗಿಕ ಕ್ರಿಯೆಗೆ ಬಳಸುವ ಕೆಲವೊಂದು ವಸ್ತುಗಳೂ ಅಲ್ಲಿ ಪತ್ತೆಯಾಗಿದೆ.ಸಂತ್ರಸ್ತ ಬಾಲಕಿಯರನ್ನು ಮತ್ತು ಆರೋಪಿಗಳನ್ನು ಠಾಣೆಗೆ ತಂದು ವಿಚಾರಿಸಿದಾಗ ಎಲ್ಲ ವಿಚಾರಗಳನ್ನೂ ಬಾಯಿಬಿಟ್ಟಿದ್ದಾರೆ.
ನಿಡ್ಡೋಡಿಯ ಮಹೇಶ, ಕಟೀಲು ಪರಿಸರದ ಯಜ್ಞೇಶ್,ದಿಲೀಪ್ ಹಾಗೂ ಶ್ರೀಕಾಂತ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ.
ಮಹೇಶನ ಮನೆಯಲ್ಲಿ ಯಾರೂ ಇಲ್ಲ.ಅವನೊಬ್ಬನೇ ವಾಸವಿದ್ದು ಆ ಮನೆಯನ್ನು ಈ ಕೃತ್ಯಕ್ಕೆ ಉಪಯೋಹಿಸುತ್ತಿದ್ದನೆನ್ನಲಾಗಿದೆ.
ಮಾಹಿತಿ ಸಿಕ್ಕ ಕೂಡಲೇ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ಪೊಲೀಸರ ತಂಡ ಅಲ್ಲಿಗೆ ಹೋಗದಿದ್ದಲ್ಲಿ ಗ್ಯಾಂಗ್ ರೇಪ್ ನಡೆದು ದೊಡ್ಡ ಮಟ್ಟಿನ ಸುದ್ದಿಯಾಗುತ್ತಿತ್ತು.ಸಂದೇಶ್ ಅವರ ಸಮಯಪ್ರಜ್ಞೆ ಮತ್ತು ಆರೋಪಿಗಳನ್ನು ಬಂಧಿಸಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.




