ನೆಲ್ಲಿಕಾರು ಪಂಚಾಯತ್ ಪಿ.ಡಿ.ಒ. ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಸುನಂದಾ ಜೈನ್ ಅವರಿಗೆ ಬೀಳ್ಕೊಡುಗೆ

Picture of Namma Bedra

Namma Bedra

Bureau Report

ನೆಲ್ಲಿಕಾರು ಗ್ರಾಮ ಪಂಚಾಯತ್ ನಲ್ಲಿ ಕಳೆದ ಏಳು ವರ್ಷಗಳಲ್ಲಿ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕುಂದಾಪುರ ತಾಲೂಕು ವ್ಯಾಪ್ತಿಯ ಪಂಚಾಯತ್ ಗೆ ವರ್ಗಾವಣೆಗೊಂಡಿರುವ ಪ್ರಶಾಂತ್ ಶೆಟ್ಟಿ ಹಾಗೂ ಇದೇ ಪಂಚಾಯತ್ ನಲ್ಲಿ ಐದು ವರ್ಷಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸುನಂದಾ ಬಿ.ಜೈನ್ ಅವರನ್ನು ಬೀಳ್ಕೊಡುವ ಸಮಾರಂಭವು ಪಂಚಾಯತ್ ಅಧ್ಯಕ್ಷ ಉದಯಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಜಯಂತ ಹೆಗ್ಡೆ, ಶಶಿಧರ ಎಂ,ಲಲಿತಾ,ಮೋಹಿನಿ, ಸಾಧು,ಪ್ರತಿಮಾ,ಆಶಾಲತಾ,ಸುನಂದ,ಅಣ್ಣಿ ಪೂಜಾರಿ, ಚಾರ್ಲ್ಸ್ ಸಾಂತ್ಮಯೋರ್,ದರೆಗುಡ್ಡೆ ಗ್ರಾ.ಪಂ.ಸದಸ್ಯರಾದ ಮುನಿರಾಜ ಹೆಗ್ಡೆ, ಸಂತೋಷ್ ಪೂಜಾರಿ, ಪಂಚಾಯತ್ ಕಾರ್ಯದರ್ಶಿ ದಾಮೋದರ, ಗ್ರಾಮ ಆಡಳಿತಾಧಿಕಾರಿ ಅನಿಲ್,ಪಿ.ಡಿ.ಒ.ರಾಜು,ಸಿಬ್ಬಂದಿ ಲಕ್ಷ್ಮಣ,ಸಂಜೀವಿನಿ ಘಟಕದ ಗೀತಾ,ಅಂಗನವಾಡಿ ಕಾರ್ಯಕರ್ತೆ ಅರುಣಾ, ವಿದೇಶ್ ಪೂಜಾರಿ, ವಿಶ್ವನಾಥ ದೇವಾಡಿಗ,ಕಿರಣ್ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ, ಪ್ರಮೀಳಾ, ಪ್ರಜ್ಞಾ ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top