ಬೆದ್ರ ರಾಜಕೀಯದಲ್ಲೊಂದು ಹೊಸ ಸಂಚಲನ *ಉಪ ಮುಖ್ಯಮಂತ್ರಿ ಡಿ.ಕೆ.ಶಿ‌.ಅವರನ್ನು ಭೇಟಿಯಾದ ಬಿಜೆಪಿ ಮುಖಂಡ *ಮಾತೃ ಪಕ್ಷದತ್ತ ಅಧಿಕಾರಿ ಚಿತ್ತ?

Picture of Namma Bedra

Namma Bedra

Bureau Report

ಇದೊಂದು ಮಾತು ಕಳೆದ ಕೆಲ ಸಮಯಗಳಿಂದ ಕೇಳಿ ಬರುತ್ತಿತ್ತು.‌ಇದೀಗ ಈ ಫೋಟೊ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಜಗದೀಶ್ ಅಧಿಕಾರಿ ಮತ್ತೆ ಮಾತೃಪಕ್ಷದತ್ತ ಹೋಗುತ್ತಾರೆ,ಅದಕ್ಕೆ ವೇದಿಕೆ ಸಿದ್ದವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು.ಇದೀಗ ಆ ಮಾತು ಸತ್ಯವಾಗುವ ದಿನಗಳು ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
ತನ್ನ ಮಿತ್ರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರಾಗಿ ಜಗದೀಶ್ ಅಧಿಕಾರಿಯವರು ಭೇಟಿಯಾಗಿದ್ದು ಬೆದ್ರ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಅಧಿಕಾರಿ ಈಗ ಬಿಜೆಪಿ ಮುಖಂಡನಾದರೂ ಡಿ.ಕೆ.ಶಿ ಸಹಿತ ಕಾಂಗ್ರೆಸ್ ನ ರಾಜ್ಯಮಟ್ಟದ ಪ್ರಭಾವಿ ಮುಖಂಡರ ಜೊತೆ ಸಂಪರ್ಕ ಇಟ್ಟುಕೊಂಡವರು.
ಒಂದರ್ಥದಲ್ಲಿ ಮೂಡುಬಿದಿರೆಯಲ್ಲಿ ಕಾಂಗ್ರೆಸನ್ನು ಕಟ್ಟಿ ಬೆಳೆಸಿದವರೇ ಅಧಿಕಾರಿ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತೆಂಬ ಅಸಮಾಧಾನದಲ್ಲಿ ಬಿಜೆಪಿ ಸೇರಿದ್ದರು.ಬಿಜೆಪಿ ಸೇರಿದ ಆರಂಭದಲ್ಲೇ ಟಿಕೆಟ್‌ ಪಡೆದು ಸ್ಪರ್ಧಿಸಿ ಸೋತರೂ ತೃತೀಯ ಸ್ಥಾನಕ್ಕೆ ತೃಪ್ತಿಪಡುತ್ತಿದ್ದ ಬಿಜೆಪಿಯನ್ನು ದ್ವಿತೀಯ ಸ್ಥಾನಕ್ಕೆ ತಂದು ನಿಲ್ಲಿಸಿದ ಹೆಗ್ಗಳಿಕೆ ಅವರದ್ದು.
‌ ಇದೀಗ ಮತ್ತೆ ಮಾತೃಪಕ್ಷ ಕಾಂಗ್ರೆಸ್ ನತ್ತ ಅವರ ಚಿತ್ತ ಇದೆ ಎಂದು ಹೇಳಲಾಗುತ್ತಿದೆ. ಅದು ನಿಜವಾದರೆ ಬೆದ್ರ ಕಾಂಗ್ರೆಸ್ ನಲ್ಲೊಂದು ಹೊಸ ಸಂಚಲನ ಮೂಡಲಿದೆ.
ಡಿ.ಕೆ.ಶಿ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಕೂಡಾ ಉಪಸ್ಥಿತರಿದ್ದು ಅಧಿಕಾರಿ-ಅವರ ನಡುವೆ ಇದ್ದ ಹಳೆಯ ಕೋಪವನ್ನು ರಾಜಿ ಮಾಡಿಕೊಂಡರೆಂದೂ ತಿಳಿದು ಬಂದಿದೆ.
ಒಟ್ಟಿನಲ್ಲಿ ಅಧಿಕಾರಿ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರಾ ಎನ್ನುವುದೇ ಪ್ರಶ್ನೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top