ಆವರಣಗೋಡೆ ಇಲ್ಲದ ಬಾವಿಗೆ ಆಯತಪ್ಪಿ ಬಿದ್ದ ಯುವಕನೋರ್ವ ಮೃತಪಟ್ಟ ಘಟನೆ ಪಡುಮಾರ್ನಾಡು ಸಮೀಪ ನಡೆದಿದೆ.
ಪಡುಮಾರ್ನಾಡು ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ ( 38) ಮೃತಪಟ್ಟ ಯುವಕ.
ಪಡುಮಾರ್ನಾಡಿನ ಮೊಡಂದೇಲ್ ಎಂಬಲ್ಲಿ ಈ ಘಟನೆ ನಡೆದಿದೆ.

ಎರಡು ದಿನದ ಹಿಂದೆ ಈ ಪರಿಸರದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದು ಬಾವಿಗೆ ಆವರಣಗೋಡೆ ಇಲ್ಲದಿರುವುದು ಗಮನಕ್ಕೆ ಬಾರದೆ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆನ್ನಲಾಗಿದೆ.
ಎರಡು ದಿನ ಕಳೆದು ಅಂದರೆ ಇಂದು ( ಗುರುವಾರ) ಮೃತದೇಹ ಪತ್ತೆಯಾಗಿದ್ದು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






