ತಾ.ಪಂ.ಮಾಜಿ ಸದಸ್ಯ, ಸಮಾಜ ಸೇವಕ ರುಕ್ಕಯ್ಯ ಪೂಜಾರಿ, ಕೃಷಿ ಸಾಧಕ ಕೆ.ಪಿ.ಸಂತೋಷ್ ಶೆಟ್ಟಿ ಹಾಗೂ ಮಾರೂರಿನ ಗೋಪಾಲ ಕೋಟ್ಯಾನ್ ಅವರಿಗೆ 2025 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮೂಡುಬಿದಿರೆ ಕ್ಷೇತ್ರದಿಂದ ಈ ಮೂವರು ಈಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರುಕ್ಕಯ್ಯ ಪೂಜಾರಿ ಅವರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯದಲ್ಲಿ ಸಕ್ರಯರಾಗಿ ಸೇವೆ ಸಲ್ಲಿಸುತ್ತಾ ಬಂದವರು.ತಾ.ಪಂ.ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಸಂತೋಷ್ ಶೆಟ್ಟಿ ಅವರು ಕಡಂದಲೆಯವರಾಗಿದ್ದು ಹಲವು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾ ಸಾಧನೆ ಮಾಡಿದವರು. ಕೃಷಿಯಲ್ಲಿ ವಿವಿಧ ರೀತಿಯ ಪ್ರಯೋಗಗಳ ಮೂಲಕ ಅದರಲ್ಲಿ ಯಶಸ್ಸು ಸಾಧಿಸಬಹುದೆಂದು ತೋರಿಸಿಕೊಟ್ಟವರು.
ಗೋಪಾಲ ಕೋಟ್ಯಾನ್ ಮೂಡುಬಿದಿರೆ ಮಾರೂರಿನವರಾಗಿದ್ದು ದೈವಾರಾಧನೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಶಿಫಾರಸ್ಸಿನಂತೆ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.










