ಉಂದು ಬೆದ್ರದ ಪರ ಮಾರ್ಕೆಟ್!

Picture of Namma Bedra

Namma Bedra

Bureau Report

ನಮ್ಮ ಬೆದ್ರದ ಹಳೆಯ ಮಾರ್ಕೆಟನ್ನೊಮ್ಮೆ ಹೀಗೇ ಸುಮ್ಮನೆ ನೆನಪಿಸಿಕೊಳ್ಳಿ. ನೆನಪಿಸಿಕೊಂಡ್ರಾ…?
ಬನ್ನಿ, ಒಂದು ರೌಂಡ್ ಹೋಗಿ ಬರೋಣ.
ಅಲ್ಲಿ ಎಂಟರೆನ್ಸ್ ನಲ್ಲಿ ಹೂ ಮಾರುವವರು, ಫ್ರೂಟ್ಸ್ ಮಾರುವವರಿದ್ದರು. ಪಕ್ಕದಲ್ಲೊಂದು ಫ್ಯಾನ್ಸಿ, ಬಟ್ಟೆ ಅಂಗಡಿ ಇತ್ತು.ದುರ್ಗಾ ಸ್ಟೋರ್ ಇತ್ತು. ಭಟ್ಟರ ಪುಗ್ಗೆರೆದಂಗಡಿ ಇತ್ತು.ಅದರ ಆಬದಿಗೆ ಹೋದಾಗ ಚಪ್ಪಲಿ ಅಂಗಡಿ, ಸದ್ದಣ್ಣನ ಸೈಕಲ್ ಅಂಗಡಿ, ಅದರ ಪಕ್ಕದಲ್ಲೊಂದು ಸೆಲೂನ್.ಮತ್ತೊಂದು ಫ್ಯಾನ್ಸಿ.ಇನ್ನೊಂದು ಫ್ರೂಟ್ಸ್ ಅಂಗಡಿ.
ಇದಿಷ್ಟು ಮಾರ್ಕೆಟ್ ಹೊರಬದಿಯ ನೆನಪು.
ಇನ್ನು ಎಂಟರೆನ್ಸ್ ದಾಟಿ ಒಳ ಹೋಗುವಾಗಲೇ ಮತ್ತೊಂದು ಫ್ರೂಟ್ಸ್ ಅಂಗಡಿ.ಅದರ ಪಕ್ಕದಲ್ಲಿ ಸುದರ್ಶನರ ಫೊಟೊ ಪ್ರೇಮ್ ಅಂಗಡಿ.
ಬಚ್ಚಿರೆ, ಬಜ್ಜೆಯಿ ಮಾರುತ್ತಿದ್ದವರು,ಜನರಲ್ ಸ್ಟೋರ್ ನವರು, ತರಕಾರಿ ವ್ಯಾಪಾರಿಗಳು, ವಸಂತ ಟೆಕ್ಸ್ ಟೈಲ್ಸ್ ಎಂಬ ಬಟ್ಟೆ ಅಂಗಡಿ, ತಾರಾಯಿದಂಗಡಿ, ಕರ್ಂಬು ಜ್ಯೂಸ್, ಶರ್ಬತ್, ಗರಂ ಮಸಾಲೆ,ಓಮ, ಜೀರ್ದರಿ,ಅಳಸಂಡೆ ಬೀಜ,ಕೊತ್ತಂಬರಿ,…. ಹೀಗೆ ಪ್ಯಾಕೆಟ್ ಮಾರಾಟ ಮಾಡುತ್ತಿದ್ದವರು,ಅಲ್ಯೂಮಿನಿಯಂ ಪಾತ್ರೆ ಮಾರಾಟಗಾರರು, ಮಣ್ಣಿನ ಪಾತ್ರೆಗಳ ಮಾರಾಟಗಾರರು.
ಕೊನೆಯ ಭಾಗದಲ್ಲಿ ಮೀನು ಮಾರಾಟಗಾರರು,ಅದರ ಪಕ್ಕದಲ್ಲಿ ರತ್ನಣ್ಣನ ಅಂಗಡಿ, ಕೋಳಿ, ಆಡು ಮಾಂಸದಂಗಡಿ, ನುಂಗೆಲ್ ಮೀನ್ ಮಾರಾಟಗಾರರು,….ಹೀಗೆ ಎಲ್ಲ ಬಗೆಯ ಮಾರಾಟಗಾರರು,ವ್ಯಾಪಾರಸ್ಥರು ಅಲ್ಲಿದ್ದರು.
‘ ಹಾ..ಐನ್ ,,,, ಪತ್ತ್ ….ಪದಿನೈನ್ ….ಇರುವ್ವ ‘ ಎಂದು ಭೂತಾಯಿಗಳನ್ನು ಎಣಿಸಿವಾಗ ಒಂದು ರಾಗದಲ್ಲೇ ಎಣಿಸುತ್ತಿದ್ದರು. ಕೊನೆಗೆ ‘ ಅಕ್ಕಗೊಂಜಿ ಜಾಸ್ತಿ,ಅಣ್ಣಗೊಂಜಿ ಜಾಸ್ತಿ ‘ ಎಂದು ಒಂದೆರಡು ಭೂತಾಯಿಗಳನ್ನು ಹೆಚ್ಚು ಹಾಕುತ್ತಿದ್ದ ಮೀನು ವ್ಯಾಪಾರಸ್ಥರು, ” ಇಂದೆ,ಅಣ್ಣ ..ಒಂಜಿ ಜಾಸ್ತಿ ಪಾಡುವೆ, ಇಡೆಬಲೆ ” ಎಂದು ತೊಟ್ಟೆಯನ್ನು ಕೈಯಲ್ಲಿ ಹಿಡ್ಕೊಂಡೇ ಕರೆಯುತ್ತಿದ್ದ ಅಕ್ಕಂದಿರು ಅಲ್ಲಿದ್ದರು. ಮಾರ್ಕೆಟ್ ಹಿಂಬದಿಯಲ್ಲೂ ಒಂದು ಗೇಟ್ ಇತ್ತು.
ಶುಕ್ರವಾರದ ಸಂತೆಯ ದಿನ ಮತ್ತು ಮಳೆಗಾಲದಲ್ಲಿ ಇದರೊಳಗೆ ಹೋಗುವುದೇ ಒಂದು ವಿಶೇಷ ಅನುಭವ.
ಈಗ ಅಲ್ಲೇನೂ ಉಳಿದಿಲ್ಲ.ಹೆಚ್ಚಿನ ವ್ಯಾಪಾರಿಗಳೂ ಈಗ ನಮ್ಮೊಂದಿಗಿಲ್ಲ.ಅಲ್ಲಿನ ವಿಶೇಷ ಅನುಭವ ಅದೆಷ್ಟು ಮಹಡಿಗಳನ್ನು ಕಟ್ಟಿದರೂ ಮತ್ತೊಮ್ಮೆ ಅನುಭವಿಸಲು ಸಾಧ್ಯನೇ ಇಲ್ಲ.ಆ ಕಾಲ ಮುಗಿದು ಹೋಗಿದೆ. ಕೆಲವೊಂದು ವಸ್ತುಗಳೂ ಮಯಕ್ಕವಾಗಿದೆ.
ಈಗ “ಪಜೆ” ಬಳಕೆ ಮಾಡುವವರು ಕಡಿಮೆ. ಆ ಮಾರ್ಕೆಟ್ ನಲ್ಲದು ಸಿಗುತ್ತಿತ್ತು. ಹೊಸ ಮಾರ್ಕೆಟ್ ಕಟ್ಟಡವಂತೂ ಕೆಲವರ್ಷ ಪಜೆ ಹಾಕಿ ಈಗ ಮತ್ತೆ ಕೆಲಸ ಪ್ರಾರಂಭಿಸಿದೆ.
ಹತ್ತು ವರ್ಷಗಳ ಹಿಂದಿನ ಮಾರ್ಕೆಟ್ ಒಳಗಿನ ಅಂಗಡಿಗಳು ಮತ್ತು ಅಂದಿನ ವ್ಯಾಪಾರಿಗಳನ್ನು ( ಕೆಲವರು ಮಾತ್ರ) ಮತ್ತೆ ಕಾಣಲು ಸಾಧ್ಯವಿಲ್ಲ.
ಅಂದಹಾಗೆ,,
ಈ ಅಪರೂಪದ ಫೊಟೊ ಕಳುಹಿಸಿ ಪರಾ ಮಾರ್ಕೆಟ್ಟನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ್ದು ಸನ್ಮಿತ್ರ ರಹೀಮ್ ಅವರು. ಅವರಿಗೆ ಧನ್ಯವಾದಗಳು. ಈ ಫೋಟೋ ಸಂಗ್ರಹಯೋಗ್ಯವಾದದ್ದು.
– ಅಶ್ರಫ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top