ಯಕ್ಷರಂಜಿನಿ ತೆಂಕಕಾರಂದೂರು ವತಿಯಿಂದ ನ.8 ಶನಿವಾರದಂದು ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಲಿರುವ ‘ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ’ ಯಕ್ಷಗಾನದ ಸಂದರ್ಭದಲ್ಲಿ ಯುವ ಯಕ್ಷಸಂಘಟಕ,ಸಮಾಜ ಸೇವಕ ಸಂದೀಪ್ ಸಾಲ್ಯಾನ್ ಶಿರ್ತಾಡಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ದ.ಕ.ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಕೇರಳ ಶೈಲಿಯ ಚೆಂಡೆಯ ವೀಡಿಯೋ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಸಂದೀಪ್ ಸಾಲ್ಯಾನ್ ಅವರು ಶಿರ್ತಾಡಿಯಲ್ಲಿ ಕರಾವಳಿ ಫ್ರೆಂಡ್ಸ್ ಸರ್ಕಲ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಆ ಮೂಲಕ ತೆಂಕುತಿಟ್ಟಿನ ಯಕ್ಷಗಾನ ಮಾಡಿ, ಆ ವೇದಿಕೆಯಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ.ಅಲ್ಲದೆ ಕೆಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಅವರು ಸಾಮಾಜಿಕ ಸೇವೆಯಲ್ಲೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಂದೀಪ್ ಅವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ ಶನಿವಾರ ಯಕ್ಷರಂಜಿನಿ ತೆಂಕಕಾರಂದೂರು ವತಿಯಿಂದ ನಡೆಯಲಿರುವ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯ ‘ ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.





