ಯಕ್ಷರಂಜಿನಿ ತೆಂಕಕಾರಂದೂರು ವತಿಯಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇಂದು ಮಧ್ಯಾಹ್ನ 2 ರಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಲಿದೆ.

ಸಂಜೆ 6 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ರಾಘವ ಪೂಜಾರಿ ಕೊಪ್ಪದೊಟ್ಟು,ಯಕ್ಷ ಸಂಘಟಕರಾದ ಜಗದೀಶ್ ಪೂಜಾರಿ ಕಜೆಕಾರು,ಸುನಿಲ್ ಬಿ.ಶೆಟ್ಟಿ ಪಳ್ಳಿ,ಸಂದೀಪ್ ಸಾಲ್ಯಾನ್ ಶಿರ್ತಾಡಿ,ಸಂತೋಷ್ ದೇವಾಡಿಗ ಅಂಗರಗುಡ್ಡೆ ಹಾಗೂ ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ ಮುಚ್ಚೂರು ಅವರಿಗೆ ಸನ್ಮಾನ ಕಾರ್ಯಕ್ರಮವಿದೆ.
ಸಭಾ ಕಾರ್ಯಕ್ರಮದಲ್ಲಿ ಹಲವು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ನಿತಿನ್ ಕುಮಾರ್ ತೆಂಕಕಾರಂದೂರು ಅವರು ತಿಳಿಸಿದ್ದಾರೆ.





