ಮೂಡುಬಿದಿರೆ ತಾಲೂಕು ಮುಸ್ಲಿಮ್ ಸೆಂಟ್ರಲ್ ಕಮಿಟಿಯ ವತಿಯಿಂದ ಮೂಡುಬಿದಿರೆ ತಾಲೂಕು ಮಸೀದಿಗಳ ವಕ್ಫ್ ಆಸ್ತಿಗಳ ನೋಂದಣಿ ಮತ್ತು ದಾಖಲೆ ಪರಿಶೀಲನೆ ಕಾರ್ಯಕ್ರಮ ಮೂಡುಬಿದಿರೆ ಕೇಂದ್ರ ಟೌನ್ ಜುಮ್ಮಾ ಮಸೀದಿಯಲ್ಲಿ ನಡೆಯಿತು.
ಮೂಡುಬಿದಿರೆ ಮಸೀದಿ ಖತೀಬರಾದ ಶರೀಫ್ ದಾರಿಮಿ ಅವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್, ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್(ಅಬ್ಬಾಕ), ಬಿ-ಹ್ಯೂಮನ್ ಮೂಡುಬಿದಿರೆ ಘಟಕದ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ,ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್,ರೋಯಲ್ ಹಮೀದ್, ಸಲೀಂ ಹಂಡೇಲ್, ಹರ್ಷದ್ ಮಾರ್ನಾಡ್, ಪಾರ್ಕರ್ ಶರೀಫ್ ಸಾಹೇಬ್,ರಝಾಕ್ ಸಚ್ಚರಿಪೇಟೆ,ಹನೀಫ್ ತೋಡಾರ್, ಇಬ್ಬಿ ಹಂಡೇಲ್, ಅಹ್ಮದ್ ಹುಸೇನ್, ಅಮೀರ್ ಹಂಡೇಲ್, ಹೆಚ್.ಎಂ.ಹಾಜಿ,ಫಾರೂಕ್ ವಿಶಾಲ್ ನಗರ ,ಮಾಲಿಕ್ ಅಝೀಝ್,ಆಸಿಫ್ ಕೋಟೆಬಾಗಿಲು , ಅಬ್ದುಲ್ ಬಶೀರ್ ಲಾಡಿ, ಇಕ್ಬಾಲ್ ಕರೀಮ್,ಅಶ್ರಫ್ ಕೋಟೆಬಾಗಿಲು,ಸಿರಾಜ್ ಕೋಟೆಬಾಗಿಲು, ಗಫೂರ್ ಕೋಟೆಬಾಗಿಲು,ಯಾಸಿರ್, ಶಹಮ್,ಝಮೀರ್,ಶಹಬಾಝ್ ಬೆಳುವಾಯಿ,ಸಲಾಮ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ಸರ್ಫರಾಝ್, ನೌಫಲ್ ಹಾಗೂ ಇಸ್ಹಾಕ್ ಅವರು ದಾಖಲೆಗಳ ಪರಿಶೀಲನೆ ನಡೆಸಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ, ನ್ಯಾಯವಾದಿ ಇರ್ಷಾದ್ ಎನ್.ಜಿ.ಅವರು ಸ್ವಾಗತಿಸಿ ವಂದಿಸಿದರು.




