ಮೂಡುಬಿದಿರೆ ಪ್ರಭಾತ್ ಸಿಲ್ಕ್ ಮಾಲಕನ ಮೊಬೈಲ್ ಹ್ಯಾಕ್ ಮಾಡಿ ಹಣದ ಬೇಡಿಕೆ ಇಟ್ಟ ವಂಚಕರು!

Picture of Namma Bedra

Namma Bedra

Bureau Report

ಇದೊಂದು ಸಂದೇಶ ಭಾನುವಾರ ಬೆಳಗ್ಗಿನಿಂದಲೇ ಬರಲು ಶುರುವಾಗಿತ್ತು. Meesho ಆಪ್ ನಂತೆಯೇ ನಕಲಿ ಖಾತೆ ತೆರೆದು ಗ್ರಾಹಕರನ್ನು ವಂಚಿಸಲೆತ್ನಿಸುತ್ತಿರುವ ವಂಚಕರ ಬಗ್ಗೆ ಜಾಗರೂಕರಾಗಲು ಆ ಸಂದೇಶ ಎಚ್ಚರಿಕೆ ನೀಡಿತ್ತು.
ಆ ಸಂದೇಶ ಹಾಗಿರುವಾಗಲೇ ಬೆದ್ರದ ಪ್ರಭಾತ್ ಸಿಲ್ಕ್ ಮಾಲಕ ಪೂರ್ಣಚಂದ್ರ ಅವರ ಮೊಬೈಲ್ ನಂಬರ್ ಹ್ಯಾಕ್ ಮಾಡಿ ಕೆಲವರಿಗೆ ಅದೇ ನಂಬರ್ ನಿಂದ ಅರ್ಜೆಂಟಾಗಿ ಹಣದ ಅಗತ್ಯವಿದ್ದು ಕಳುಹಿಸಲು ವಿನಂತಿಸಿದ್ದಾರೆ.
‌ ಅದು ಪೂರ್ಣಚಂದ್ರ ಅವರ ಮೊಬೈಲ್ ನಿಂದಲೇ ಹೋಗಿರುವುದರಿಂದ ನಂಬುವಂತಾಗಿತ್ತು.ಆದರೆ ಸಕಾಲದಲ್ಲಿ ಪೂರ್ಣಚಂದ್ರ ಅವರಿಗೆ ಮಾಹಿತಿ ನೀಡಿದ ನಂತರವೇ ಈ ವಿಚಾರ ಬೆಳಕಿಗೆ ಬಂದಿದೆ.
‌ ಆತ್ಮೀಯರ ಮೊಬೈಲ್ ನಿಂದ ಈ ರೀತಿಯ ರಿಕ್ವೆಸ್ಟ್ ಬಂದರೆ ಒಂದಿಷ್ಟು ಯೋಚಿಸುವುದೊಳ್ಳೆಯದು.ಆತ್ಮೀಯನಿಗೆ ಅರ್ಜೆಂಟ್ ಇದೆಯೆಂದು ನಂಬಿ ಅರ್ಜೆಂಟಾಗಿ ಹಣ ಕಳುಹಿಸಿದರೆ ಅದು ಅಷ್ಟೇ ಅರ್ಜೆಂಟಾಗಿ ಹ್ಯಾಕರ್ಸ್ ಗಳ ಪಾಲಾಗುತ್ತದೆ!

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top