ಮೂಡುಬಿದಿರೆ ವಿಧಾನಸಭಾ ಕ್ಷೇತ್ರ: ಕಾನೂನು, ಮಾನವ ಹಕ್ಕು, ಮಾಹಿತಿ ಹಕ್ಕು ಘಟಕದ ಅಧ್ಯಕ್ಷರಾಗಿ ಮರ್ವಿನ್ ಲೋಬೋ

Picture of Namma Bedra

Namma Bedra

Bureau Report

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು,ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮೂಡುಬಿದಿರೆಯ ಯುವ ನ್ಯಾಯವಾದಿ ಮರ್ವಿನ್ ಜಾನ್ಸನ್ ಲೋಬೋ ಅವರು ಆಯ್ಕೆಯಾಗಿದ್ದಾರೆ.
‌ ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಮರ್ವಿನ್ ಅವರು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಬಂದವರು. ಮಹಾವೀರ ಕಾಲಾಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ ಎನ.ಎಸ್.ಯು.ಐ.ಅಧ್ಯಕ್ಷರಾಗಿ,2009 ರಲ್ಲಿ ಭಾರತೀಯ ಕ್ಯಾಥೊಲಿಕ್ ಯುವ ಸಂಚಲನ ,ಮೂಡುಬಿದಿರೆ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೂಡುಬಿದಿರೆಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಜೊತೆಗೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡವರು.
ಅವರ ಸುದೀರ್ಘ ವರ್ಷಗಳ ಪಕ್ಷದ ಸೇವೆಯನ್ನು ಗುರುತಿಸಿ ಈ ವಿಭಾಗದ ರಾಜ್ಯಾಧ್ಯಕ್ಷ ಸಿ.ಎಂ.ಧನಂಜಯ ಅವರ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇವರ ಆಯ್ಕೆಯನ್ನು ಅನುಮೋದಿಸಿದ್ದಾರೆ.
ಉಪಾಧ್ಯಕ್ಷರಾಗಿ ವಕೀಲರಾದ ವೀಣಾ ಭಟ್,ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಕುಮಾರ್, ಕಾರ್ಯದರ್ಶಿಯಾಗಿ ಇರ್ಷಾದ್ ಎನ್‌‌.ಜಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಡಿಸೋಜ,ಖಜಾಂಚಿಯಾಗಿ ಅಮರೇಂದ್ರ ಹೆಚ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಪಿ, ರಾಜೇಶ್ ಸುವರ್ಣ,ಪದ್ಮಪ್ರಸಾದ್,ವಿಜೇತ ಪಿಂಕಿ ಡೇಸ,ಜ್ಯೋತಿ, ಶ್ವೇತ,ನಿಖಿತ ರೆಬೆಲ್ಲೊ,ಮ್ಯಾಥ್ಯೂ ಮಸ್ಕರೇನಸ್,ಅಭಿನಂದನ್ ಬಲ್ಲಾಳ್ ಹಾಗೂ ಪ್ರಜ್ವಲ್ ಡಿಸೋಜ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top