ಬಿಜೆಪಿ ರಾಜ್ಯಾಧ್ಯಕ್ಷ ಇಂದು ಮೂಡುಬಿದಿರೆಗೆ *ಸಂಜೆ ಆಳ್ವರ ಮನೆಯಲ್ಲಿ ವಾಸ್ತವ್ಯ

Picture of Namma Bedra

Namma Bedra

Bureau Report

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಸಂಜೆ ಮೂಡುಬಿದಿರೆಗೆ ಬರಲಿದ್ದು ರಾತ್ರಿ ಡಾ.ಮೋಹನ ಆಳ್ವರ ಮನೆಯಲ್ಲಿ ವಾಸ್ತವ್ಯ ಇರಲಿದ್ದಾರೆ.
ಸಂಜೆ ಬಜ್ಪೆ ವಿಮಾನನಿಲ್ದಾಣದಿಂದ ಕಾರ್ಕಳಕ್ಕೆ ಹೋಗಲಿದ್ದು ಅಲ್ಲಿಂದ ಮತ್ತೆ ವಾಪಾಸು ಮೂಡುಬಿದಿರೆಗೆ ಬಂದು ರಾತ್ರಿ ಡಾ.ಆಳ್ವರ ಮನೆಯಲ್ಲಿ ವಾಸ್ತವ್ಯ. ನಾಳೆ ಬೆಳಿಗ್ಗೆ ಪುತ್ತೂರಿನಲ್ಲಿ ನಡೆಯಲಿರುವ ಅಟಲ್ ವಿರಾಸತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂಡುಬಿದಿರೆಯಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top