ಸಹಕಾರಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ‘ ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಾದ ಕಾಶಿಪಟ್ಣ ಗ್ರಾ.ಪಂ.ಅಧ್ಯಕ್ಷ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಕೆ.ಬಂಗೇರ ಅವರನ್ನು ಕಾಶಿಪಟ್ಣ ಶಾಲಾ ಎಸ್.ಡಿ.ಎಂ.ಸಿ. ವತಿಯಿಂದ ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ವಿದ್ಯಾನಂದ,ಸದಸ್ಯರು ಉಪಸ್ಥಿತರಿದ್ದರು.
ಅದೇ ದಿನ ಬೆಳಿಗ್ಗೆ ಸತೀಶ್ ಕೆ.ಅವರ ಮನೆಗೆ ತೆರಳಿ ಸತೀಶ್ ದಂಪತಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಸದಸ್ಯ, ಎಸ್.ಕೆ.ಎಸ್.ಎಸ್.ಎಫ್. ಕಾಶಿಪಟ್ಣ ಶಾಖೆಯ ಅಧ್ಯಕ್ಷ ಹಮೀದ್, ಗರೋಡಿ ಫ್ರೆಂಡ್ಸ್ ಗೌರವಾಧ್ಯಕ್ಷ ಜಿತೇಶ್ ಬಿ, ಜನಜಾಗೃತಿ ವೇದಿಕೆಯ ಪ್ರಮುಖರಾದ ಸುಬ್ಬಣ್ಣ ಸಾಲ್ಯಾನ್, ಹಿಬಾರಿ ಭೋಜ ಪೂಜಾರಿ, ಖಂಡಿಗ ರವಿ ಪೂಜಾರಿ, ಗರೋಡಿ ಫ್ರೆಂಡ್ಸ್ ಅಧ್ಯಕ್ಷ ಮನೋಜ್ ಕೆ, ಮತ್ತಿತರರು ಉಪಸ್ಥಿತರಿದ್ದರು.






