ನಾಲ್ಕು ಮಂದಿಯ ತಂಡವೊಂದು ಯುವಕನೋರ್ವನ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆ ಇಂದು ಸಂಜೆ ಎಡಪದವಿನಲ್ಲಿ ನಡೆದಿದೆ.
ಅಖಿಲೇಶ್ ಎಂಬ ಯುವಕನ ಮೇಲೆ ಈ ದಾಳಿ ನಡೆದಿದ್ದು ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರು ಪರಾರಿಯಾಗಿದ್ದು ಓರ್ವ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆಂದು ತಿಳಿದು ಬಂದಿದೆ.
ನಾಲ್ಕು ಮಂದಿ ಅಖಲೇಶ್ ನನ್ನು ಬೆನ್ನಟ್ಟಿಕೊಂಡು ಬಂದು ತಲವಾರು ದಾಳಿ ನಡೆಸಿದ್ದು ಯಾವ ಕಾರಣಕ್ಕೆ ಈ ದಾಳಿ ನಡೆದಿದೆಯೆಂದು ತಿಳಿದು ಬಂದಿಲ್ಲ.






