ಇತ್ತೀಚೆಗೆ ಮಹಾರಾಷ್ಟ್ರದ ಅಂದೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕಾಂಬಕ್ಟ್ ಮಾರ್ಸಲ್ ಅರ್ಟ್ಸ್ ಅಕಾಡೆಮಿ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಮಂಗಳೂರಿನ ಇಫ್ಜ್ ಖದೀಜ ಹಲೀಮ 7 – 9 ವರ್ಷ ವಯೋಮಿತಿಯ ಕಟ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ವನ್ನು ಪಡೆದಿರುತ್ತಾರೆ. ಇವರು ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ನ ಮುಖ್ಯ ಶಿಕ್ಷಕ ಮಹಮ್ಮದ್ ನದೀಮ್ ಇವರಿಂದ ತರಬೇತಿ ಪಡೆಯುತಿದ್ದಾರೆ.






