ಪೆರಿಂಜೆಯಲ್ಲಿಂದು ‘ಹೆಚ್.ಪಿ.ಪೆಟ್ರೋಲ್ ಬಂಕ್’ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಮೀಪದ ಹೊಸಂಗಡಿ ಗ್ರಾಮದ ಪೆರಿಂಜೆಯಲ್ಲಿ ರೇವತಿ ಎಂಟರ್ ಪ್ರೈಸಸ್ ವತಿಯಿಂದ ನಿರ್ಮಾಣಗೊಂಡಿರುವ ನೂತನ ಹೆಚ್.ಪಿ ಪೆಟ್ರೋಲ್ ಬಂಕ್ ನ ಉದ್ಘಾಟನೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ ಹಾಗೂ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿಗಳಾದ ಎ.ಜೀವಂಧರ ಕುಮಾರ್ ಅವರು ದೀಪ ಪ್ರಜ್ವಲಿಸಲಿದ್ದಾರೆ.
ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್, ಹೆಚ್.ಪಿ.ಸಿ.ಎಲ್ ಮಂಗಳೂರು ವಲಯ ಡಿ.ಜಿ.ಎಮ್. ನವೀನ್ ಕುಮಾರ್ ಎಂ.ಜಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ನೂತನ ಪೆಟ್ರೋಲ್ ಬಂಕನ್ನು ಉದ್ಘಾಟಿಸಲಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ವಿಶ್ವ ಬಂಟರ ಫೌಂಡೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್,ಮುಂಬಯಿ ಕಲ್ಯಾಣ್ ಕ್ಷೇತ್ರದ ಶಾಸಕ ವಿಶ್ವನಾಥ್ ಆತ್ಮರಾಮ್ ಭೋಯಿರ್,ರಾಧಾ ಮೆಡಿಕಲ್ಸ್ ಹಾಗೂ ಸಾಯಿ ಪ್ಯಾಲೇಸ್ ಗ್ರೂಪ್ ಮುಖ್ಯಸ್ಥ ರವಿ ಎಸ್.ಶೆಟ್ಟಿ,ಶಶಿ ಕ್ಯಾಟರರ್ಸ್ ಮುಖ್ಯಸ್ಥ ಶಶಿಧರ ಶೆಟ್ಟಿ ಬರೋಡ, ಹೆಚ.ಪಿ.ಸಿ.ಎಲ್. ಮಂಗಳೂರು ವಲಯ ಏರಿಯಾ ಸೇಲ್ಸ್ ಮೆನೇಜರ್ ಇಶಿಟಾ ಗರ್ಗ್,ಮುಂಬಯಿ ಕಲ್ಯಾಣ್ ವೆಸ್ಟ್ ನ ಮಾಜಿ ಕಾರ್ಪೊರೇಟರ್ ಜಯ್ ವಾಣಿ ಭೋಯಿರ್, ಮುಂಬಯಿ ಮಾಜಿ ಕಾರ್ಪೊರೇಟರ್, ಶಿವಸೇನೆಯ ಪ್ರಮುಖ ಪ್ರಭುನಾಥ್ ಆತ್ಮರಾಮ್ ಭೋಯಿರ್,ಹೆಚ್.ಪಿ.ಸಿ.ಎಲ್.ಮಂಗಳೂರು ವಲಯ ಮುಖ್ಯ ಇಂಜಿನಿಯರ್ ಪ್ರಭಾತ್ ಶ್ರೀವಾಸ್ತವ್,ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ,ಮುಂಬಯಿ ಕಲ್ಯಾಣ್ ನ ರಿಟ್ಝ್ ಕಂಪೆನಿಯ ವಿಕಾಸ್ ಜೈನ್,ಪೂಲಬೆ ಜುಮ್ಮಾ ಮಸೀದಿಯ ಅಧ್ಯಕ್ಷ ಹೆಚ್.ಆಲಿಯಬ್ಬ ಹಾಗೂ ವೇಣೂರು ಚರ್ಚ್ ಧರ್ಮಗುರುಗಳಾದ ರೆ.ಫಾ.ಎಡ್ವಿನ್ ಸಂತೋಷ್ ಮೋನಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಕಟೀಲು ಮೇಳದವರಿಂದ ‘ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದ್ದು ಚೌಕಿ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ರೇವತಿ ಎಂಟರ್ ಪ್ರೈಸಸ್ ಮುಖ್ಯಸ್ಥರಾದ ಶ್ರೀಮತಿ ದೇವಿಕಾ ವಿ.ಶೆಟ್ಟಿ, ವಿಶ್ವನಾಥ್ ಎಸ್.ಶೆಟ್ಟಿ ಹಾಗೂ ಶ್ರೀಮತಿ ರೇವತಿ ವಿಶ್ವನಾಥ ಶೆಟ್ಟಿ ಅವರು ತಿಳಿಸಿದ್ದಾರೆ.
ವರದಿ: ಹೆಚ್.ಮುಹಮ್ಮದ್ ವೇಣೂರು

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top