ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮುರಳೀಧರ ಕೋಟ್ಯಾನ್

Picture of Namma Bedra

Namma Bedra

Bureau Report

ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿಯ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಪುತ್ತಿಗೆ ಪಂಚಾಯತ್ ಸದಸ್ಯ ಮುರಳೀಧರ ಕೋಟ್ಯಾನ್ ಅವರು ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇವರ ಆದೇಶದ ಮೇರೆಗೆ ಅಭಯಚಂದ್ರ, ಮಿಥುನ್ ರೈ ಮತ್ತು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಅವರ ಶಿಫಾರಸ್ಸಿನಂತೆ ಈ ಆಯ್ಕೆ ನಡೆದಿದೆ.
ಪುತ್ತಿಗೆ ಪಂಚಾಯತ್ ಸದಸ್ಯರಾಗಿರುವ ಮರಳೀಧರ ಕೋಟ್ಯಾನ್ ಅವರು ಯುವವಾಹಿನಿ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ‌.

ಮೀನುಗಾರರ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಮಂಜುನಾಥ ಬಿ.ಸುಣಗಾರ ಅವರು ಆದೇಶ ಪತ್ರವನ್ನು ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಾಯತ್ರಿ ನಾಗರಾಜ್,ಮೂಡುಬಿದಿರೆ ಕಾಂಗ್ರೆಸ್ ಮುಖಂಡ ಸುರೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top