ಬೆದ್ರದ ಪ್ರಾಂತ್ಯ ಶಾಲೆಯ ಪಕ್ಕದಲ್ಲಿ ಕಸ ವಿಲೇವಾರಿ ಘಟಕಕ್ಕೆ ಪುರಸಭೆ ಮುಂದಾಗಿದೆ.ಇದಕ್ಕೆ ಆ ಭಾಗದ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ರೋಟರಿ ಸಂಸ್ಥೆಯವರು ಅಲ್ಲೊಂದು ನಾಮಫಲಕ ಹಾಕಿದ್ದಾರೆ. ಅಲ್ಲಿ ಕಸ ಹಾಕಬಾರದು ಎನ್ನುವುದು ಆ ನಾಮಫಲಕದ ಉದ್ದೇಶ. ಆದರೆ ಅದೇ ಜಾಗದಲ್ಲಿ ಪುರಸಭೆಯವರು ನುಂಗೆಲ್ ಕಜವು, ಪಜ್ಜಿ ಕಜವು ಅಂತ ಬೇರ್ಪಡಿಸಲು ಘಟಕ ನಿರ್ಮಿಸಲು ಪಂಚಾಂಗ ಹಾಕಿದ್ದಾರೆ.

ಶಾಲಾ ವಠಾರ, ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಜನ ತಿರುಗಾಡುವ ಪ್ರದೇಶ. ಅಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆ ಪರಿಸರದ ಜನರು ವಿರೋಧ ವ್ಯಕ್ತಪಡಿಸಿದ್ದು ಕಜವುಗಳು ಶಿಫ್ಟ್ ಆಗುವ ಚಾನ್ಸ್ ಇದೆ.
ಇಲ್ಲದಿದ್ದಲ್ಲಿ ಒಂದು ಸ್ಟ್ರಾಂಗಾದ ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿದೆ.






