ಶ್ರೀರಾಮ್ ಫೈನಾನ್ಸ್ ಲೋನ್ ಗೆ ಜಾಮೀನು ಹಾಕಿದ ಪ್ರಕರಣ *ಎರಡನೇ ಆರೋಪಿ ಖುಲಾಸೆ *ಆರೋಪಿ ಪರ ವಾದಿಸಿದ್ದ ಯುವ ನ್ಯಾಯವಾದಿ ಮರ್ವಿನ್ ಜಾನ್ಸನ್ ಲೋಬೊ

Picture of Namma Bedra

Namma Bedra

Bureau Report

ವಾಹನ ಖರೀದಿಗೆ ಶ್ರೀರಾಮ್ ಫೈನಾನ್ಸ್ ನಿಂದ ಸಾಲಪಡೆದು ವಾಪಾಸು ಕಟ್ಟದೆ ವಂಚಿಸಿದ್ದ ಆರೋಪಿಗೆ ಜಾಮೀನು ಹಾಕಿದ್ದ ಜಾಮೀನುದಾರನ ವಿರುದ್ಧ ಹೂಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ನೀಡಿದೆ.
ಸುಳ್ಯದ ಶ್ರೀನಿವಾಸ ಎಂಬಾತ ಟಾಟಾ ಹಿಟಾಚಿ ವಾಹನ ಖರೀದಿಗೆಂದು ಶ್ರೀ ರಾಮ್ ಫೈನಾನ್ಸ್ ಮೂಡುಬಿದಿರೆ ಶಾಖೆಯಿಂದ ದೊಡ್ಡಮೊತ್ತದ ಸಾಲ ಪಡೆದಿದ್ದರು.ಅದು ಸುಮಾರು 69 ಲಕ್ಷ ಎಂದು ಫೈನಾನ್ಸ್ ನವರು ದೂರು ದಾಖಲಿಸಿದ್ದರು.ಆದರೆ ಮುಖ್ಯ ಆರೋಪಿ ಸಾಲವನ್ನೂ ವಾಪಾಸು ಕಟ್ಟದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.
ಶ್ರೀನಿವಾಸನಿಗೆ ಜಾಮೀನು ಹಾಕಿದ್ದ ಸುಳ್ಯದ ಕರುಣಾಕರ ಎಂಬಾತನ ವಿರುದ್ಧವೂ ಮೋಸ,ವಂಚನೆ ಪ್ರಕರಣ ದಾಖಲಾಗಿ ಮೂಡುಬಿದಿರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಇದೀಗ ಹಲವು ಬಾರಿ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನುದಾರ ಕರುಣಾಕರನನ್ನು ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಆರೋಪಿ ಪರ ಮೂಡುಬಿದಿರೆಯ ಯುವ ನ್ಯಾಯವಾದಿ ಮರ್ವಿನ್ ಜಾನ್ಸನ್ ಲೋಬೊ ಅವರು ವಾದಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top