ಈ ಮನುಷ್ಯನಿಗೆ ರಾತ್ರಿ ಹಗಲು ಬೇಕಾಗಿಲ್ಲ. ಕೆಲಸವಾದರೆ ಸಾಕು,ಅದು ಸಾರ್ವಜನಿಕರಿಗೆ ಉಪಕಾರವಾದರೆ ಸಾಕು.ಆ ಏಕೈಕ ಉದ್ದೇಶದಿಂದ ಕಳೆದ ರಾತ್ರಿ ಮೂಡುಬಿದಿರೆ ಬಸ್ಸುನಿಲ್ದಾಣದ ನಡುವಿನ ರಸ್ತೆ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಬಿದ್ದಿದ್ದ ಹೊಂಡಗಳನ್ನು ತಾನೇ ನಿಂತು ಸರಿಪಡಿಸಿ ಮಾದರಿಯಾಗಿದ್ದಾರೆ.


ರಾಜೇಶ್ ನಾಯ್ಕ್. ಮೂಡುಬಿದಿರೆ ಪುರಸಭಾ ಸದಸ್ಯ. ಪುರಸಭಾಧಿವೇಶನಗಳಲ್ಲಿ ತನ್ನ ವಾರ್ಡ್ ಮಾತ್ರವಲ್ಲದೆ ಸಾರ್ವಜನಿಕರಿಗೆ ಉಪಕಾರವಾಗಬೇಕಿದ್ದ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿರುವ ಕೌನ್ಸಿಲರ್. ಅವರ ಮಾತಿಗೊಂದು ತೂಕವಿದೆ.ಅವರು ಎದ್ದು ನಿಂತರೆಂದರೆ ಯಾವುದಾದರೊಂದು ಇಂಪಾರ್ಟೆಂಟ್ ಸಬ್ಜೆಕ್ಟ್ ಇದೆ ಎಂದೇ ಅರ್ಥ.
ಮೂಡುಬಿದಿರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಜೇಶ್ ನಾಯ್ಕ್ ಅವರು ಹಿಂದೊಮ್ಮೆ ಮಳೆಗಾಲದ ಬೆಳ್ಳಂಬೆಳಗ್ಗೆ ರಸ್ತೆ ಸರಿಪಡಿಸುವಲ್ಲಿ ಗಮನಸೆಳೆದಿದ್ದರು.


ಇದೀಗ ಕಳೆದ ರಾತ್ರಿ ಸ್ವತಃ ನಿಂತು ರಸ್ತೆ ಸರಿಪಡಿಸುವ ಮೂಲಕ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.
ಅವರ ಈ ಸೇವಾ ಶೈಲಿಗೆ ಮೂಡುಬಿದಿರೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






