ಹೊಸ್ಮಾರು ಸಮೀಪ ಇಂದು ಬೆಳಿಗ್ಗೆ ಹಣ್ಣಿನ ವ್ಯಾಪಾರಿಯೊಬ್ಬನನ್ನು ಅಡ್ಡಗಟ್ಟಿದ ತಂಡವೊಂದು ಆತನಲ್ಲಿದ್ದ 19,000 ರೂ.ಗಳನ್ನು ದೋಚಿಕೊಂಡು ಹೋಗಿದೆ.
ಹೊಸ್ಮಾರಿನ ಮಹಮ್ಮದ್ ಎಂಬವರು ಹಣ ಕಳೆದುಕೊಂಡವರು.
ಮಹಮ್ಮದ್ ಅವರು ಹಣ್ಣಿನ ವ್ಯಾಪಾರಿಯಾಗಿದ್ದು ಮಂಗಳೂರಿನಿಂದ ಹಣ್ಣುಗಳನ್ನು ತಂದು ಕಿನ್ನಿಗೋಳಿಗೆ ಹೋಗಲೆಂದು ತಯಾರಾಗಿ ಬೆಳಿಗ್ಗೆ ಮೂರು ಗಂಟೆಗೆ ಮಂಗಳೂರಿಗೆ ಹೊರಟಿದ್ದರು.
ಹೊಸ್ಮಾರು ಸಮೀಪದಲ್ಲೇ ಅಡ್ಡಗಟ್ಟಿದ ತಂಡವು ಆತನಲ್ಲಿದ್ದ 19,000 ರೂ.ಗಳನ್ನು ದೋಚಿಕೊಂಡು ಪರಾರಿಯಾಗಿದೆ.
ಈಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ಪರಿಸರ ಹಾಗೂ ಮಹಮ್ಮದ್ ಅವರನ್ನು ಬಲ್ಲವರಿಂದಲೇ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.






