ಮಾಂಟ್ರಾಡಿಯಲ್ಲಿ ದರೋಡೆ, ದನಕಳ್ಳತನ, ವಾಮಾಚಾರ *ಸಿಸಿಟಿವಿ ಅಳವಡಿಕೆಗೆ ಶಶಿಧರ ಎಂ.ಮನವಿ

Picture of Namma Bedra

Namma Bedra

Bureau Report

ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಪರಿಸರದಲ್ಲಿ ದನಕಳ್ಳತನ,ದರೋಡೆ,ವಾಮಾಚಾರದಂತಹ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಸದಸ್ಯ ಶಶಿಧರ ಎಂ.ಅವರು ನೆಲ್ಲಿಕಾರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಮಾಂಟ್ರಾಡಿಯ ಡೆಂಜಾರು ಎಂಬಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿದ ತಂಡವೊಂದು ಅವರಿಂದ ಹಣ ದರೋಡೆ ಮಾಡಿದೆ,ಹಲವುಬಾರಿ ಈ ಪ್ರದೇಶದಿಂದ ದನಕಳ್ಳತನ ನಡೆದಿದೆ, ಕೆಲವು ಕೂಡು ರಸ್ತೆಗಳಲ್ಲಿ ವಾಮಾಚಾರದಂತಹ ಕೃತ್ಯಗಳನ್ನೂ ನಡೆಸಲಾಗಿದ್ದು ಈ ಎಲ್ಲ ಪ್ರಕರಣಗಳನ್ನು ನಿಯಂತ್ರಿಸಲು ಶೀಘ್ರವೇ ಸಿಸಿಟಿವಿ ಅಳವಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇಂತಹ ಅಪರಾಧ ಚಡುವಟಿಕೆಗಳನ್ನು ನಿಯಂತ್ರಿಸಲು ಸಿಸಿಟಿವಿ ಅಳವಡಿಕೆಗೆ ಪಂಚಾಯತ್ ನ ಸಭೆಯಲ್ಲಿ ನಿರ್ಣಯಿಸಿ ಕ್ರಿಯಾಯೋಜನೆಯಲ್ಲಿ ಅನುದಾನ ನಿಗದಿಪಡಿಸಲಾಗಿತ್ತು.ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.ಇನ್ನಷ್ಟು ಅಪರಾಧ ಚಟುವಟಿಕೆಗಳಾಗುವ ಮುನ್ನ ಶೀಘ್ರದಲ್ಲೇ ಸಿಸಿಟಿವಿ ಅಳವಡಿಸುವ ವ್ಯವಸ್ಥೆಯನ್ನು ಪಂಚಾಯತ್ ಮಾಡಬೇಕೆಂದು ಶಶಿಧರ ಎಂ.ಅವರು ಮನವಿ ಮಾಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top