ಪವಿತ್ರ ಉಮ್ರಾಯಾತ್ರೆಗೆ ತೆರಳಲಿರುವ ವಾಲ್ಪಾಡಿ ಜುಮ್ಮಾ ಮಸೀದಿ ಆಡಳಿತ ಕಮಿಟಿಯ ಗೌರವಾಧ್ಯಕ್ಷರಾಗಿರುವ ಮುಹಮ್ಮದ್ ದೋಣಿಬಾಗಿಲು ( ಮೋನಾಕ) ಅವರನ್ನು ಶುಕ್ರವಾರ ಮಸೀದಿ ಕಮಿಟಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಮಸೀದಿಯಲ್ಲಿ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಶರೀಫ್ ಎಂ.ಎಂ.ಅವರು ಗೌರವಿಸಿದರು.
ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ,ಸದರ್ ಅಬ್ದುಲ್ ಹಕೀಮ್ ಅಶ್ರಫಿ,ಮುಅಝ್ಜಿನ್ ಹನೀಫ್ ಮುಸ್ಲಿಯಾರ್, ಮಕ್ಕಿ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ,ಮಸೀದಿ ಕಮಿಟಿಯ ಕಾರ್ಯದರ್ಶಿ ಝಕರಿಯಾ ಯೂಸುಫ್, ಖಜಾಂಚಿ ಉಬೈದುಲ್ಲಾ, ಖಾದರ್ ದೋಣಿಬಾಗಿಲು,ಇಬ್ರಾಹಿಂ ವಾಲ್ಪಾಡಿ, ಜಮಾಲುದ್ದೀನ್,ನಝೀರ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






