ಬೆದ್ರ ಸಿಂಗಮ್ ಬಲೆಗೆ ಬಿದ್ದ ಬಂಟ್ವಾಳದ ರೌಡಿಶೀಟರ್! *ಎಂ.ಡಿ.ಎಂ,ಎ,ತಲವಾರು ವಶಕ್ಕೆ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಸಿಂಗಮ್ ಎಂದೇ ಹೆಸರಾಗಿರುವ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಸಿನಿಮೀಯ ಶೈಲಿಯ ಕಾರ್ಯಾಚರಣೆಯಲ್ಲಿ ಬಂಟ್ವಾಳದ ರೌಡಿಶೀಡರ್ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.


ಕಲ್ಲಡ್ಕದ ತೌಸೀಫ್ ಯಾನೆ ಅಪ್ಪಿ ಬಂಧಿತ ಆರೋಪಿ.
ಆರೋಪಿಯಿಂದ ಸುಮಾರು 50 ಸಾವಿರದಷ್ಟು ಅಂದಾಜಿನ 10 ಗ್ರಾಂ. ಎಂ.ಡಿ.ಎಂ.ಎ ಮಾದಕವಸ್ತು ಹಾಗೂ ತಲವಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಆರೋಪಿ ತಲವಾರು ಇಟ್ಟುಕೊಂಡು ಕಾರೊಂದರಲ್ಲಿ ತಿರುಗಾಡುತ್ತಿರುವ ಖಚಿತ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಸಂದೇಶ್ ಪಿ‌ಜಿ ಅವರ ನೇತೃತ್ವದ ಪೊಲೀಸರ ತಂಡವು ಆರೋಪಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆಗಿಳಿಯುತ್ತದೆ.ಆತನ ಕಾರು ಕೊಡಂಗಲ್ಲು ಸಮೀಪ ಇರುವ ಮಾಹಿತಿ ಸಿಗುತ್ತದೆ. ಆದರೆ ಪೊಲೀಸರನ್ನು ಕಂಡ ಆತ ಕಾರನ್ನು ಹಿಂದಕ್ಕೆ ಚಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ.ಪೊಲೀಸರು ಸುತ್ತುವರಿದಾಗ ಆತ ಕಾರಿನಿಂದಿಳಿಯದೆ ಅಲ್ಲೂ ಪೊಲೀಸರಿಗೆ ವಿರುದ್ಧವಾಗಿ ವರ್ತಿಸಿದ್ದ.
ಆತನ ಕಾರ್ಬಾರು ಇನ್ಸ್ಪೆಕ್ಟರ್ ಸಂದೇಶ್ ಅವರೆದುರು ನಡೆಯಲಿಲ್ಲ. ಅದ್ಹೇಗೋ ಹರಸಾಹಸಮಾಡಿ ಸಿಮೆಮಾ ಶೈಲಿಯಲ್ಲಿ ಆರೋಪಿಯನ್ನು ಹಿಡಿದಂತೆ ಹಿಡಿಯುವಲ್ಲಿ ಸಂದೇಶ್ ಅವರ ತಂಡ ಯಶಸ್ವಿಯಾಗಿದೆ.
ಕೆಲಕಾಲ ನಡೆದ ಈ ಕಾರ್ಯಾಚರಣೆಯನ್ನು ಆ ಪರಿಸರದ ಜನರು ಸಿನೆಮಾ ಶೂಟಿಂಗ್ ನೋಡಿದಂತೆ ಕುತೂಹಲದಿಂದ ನೋಡಿದ್ದಾರೆ.ಕೆಲವರು ಪೊಲೀಸರಿಗೆ ಸಹಕಾರವನ್ನೂ ನೀಡಿದ್ದಾರೆ.
ಅದ್ಹೇಗೋ ಕಾರಿನಿಂದ ಇಳಿಸಿದ ಅಪ್ಪಿಯನ್ನು ಪೊಲೀಸ್ ಶೈಲಿಯಲ್ಲಿ ಅಪ್ಪಿಹಿಡಿದು ಠಾಣೆಗೆ ಕೊಂಡೊಯ್ದಿದ್ದಾರೆ. ಆತನ ಕಾರಿನಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು, ಒಂದು ತಲವಾರು ಪತ್ತೆಯಾಗಿದೆ.
ಆರೋಪಿಯ ವಿರುದ್ಧ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆತನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಐದು ಪ್ರಕರಣಗಳಿದ್ದು ರೌಡಿಶೀಟರ್ ಆಗಿದ್ದಾನೆ.
ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಕೀಲ್ ಅಹ್ಮದ್, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ನಾಗರಾಜ್, ದೇವರಾಜ್, ಚಂದ್ರಹಾಸ ರೈ ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top