ತಾಲೂಕು ಮಟ್ಟದ ದಫ್ ಸ್ಪರ್ಧೆ: ಮಕ್ಕಿ ದಾರುಸ್ಸಲಾಮ್ ತಂಡ ಪ್ರಥಮ

Picture of Namma Bedra

Namma Bedra

Bureau Report

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮೂಡುಬಿದಿರೆ ಹಂಡೇಲು ಮಸೀದಿಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಮೂಲ್ಕಿ-ಮೂಡುಬಿದಿರೆ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ಶಿರ್ತಾಡಿ ಮಕ್ಕಿಯ ದಾರುಸ್ಸಲಾಮ್ ದಫ್ ಕಮಿಟಿ ತಂಡವು ಪ್ರಥಮ ಸ್ಥಾನ ಗಳಿಸಿದೆ.


ತಾಲೂಕಿನ ವಿವಿಧ ದಫ್ ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ತೋಡಾರು ತಂಡವು ದ್ವಿತೀಯ ಸ್ಥಾನ ಪಡೆದಿದೆ.
ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಅವರು ದುವಾ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದು ಮಸೀದಿ ಕಮಿಟಿಯ ಅಧ್ಯಕ್ಷರಾದ ಹೆಚ್.ಎಮ್.ಅಬ್ದುಲ್ ಖಾದರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಗೆ ಮಸೀದಿಯ ಖತೀಬರಾದ ಜಾಫರ್ ಫೈಝಿ,ಸಲೀಂ ಹಂಡೇಲ್,ಮಯ್ಯದ್ದಿ,ಆಸಿಫ್ ಹಂಡೇಲ್, ಇಬ್ರಾಹಿಂ ಹಂಡೇಲ್,ಸುಲೈಮಾನ್,ಅಮೀರ್ ಹಂಡೇಲ್,ಹೈದರ್ ಹಂಡೇಲ್, ಶಬ್ಬೀರ್ ಹಂಡೇಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದಾರುಸ್ಸಲಾಮ್ ಮಕ್ಕಿ ತಂಡವು ಉಪ್ಪಿನಂಗಡಿ ಜೋಗಿಬೆಟ್ಟುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಚತುರ್ಥ ಬಹುಮಾನ ಪಡೆದಿದೆ.
ಶರೀಫ್ ಮಕ್ಕಿ, ಇರ್ಷಾದ್ ಶಿರ್ತಾಡಿ ಹಾಗೂ ಪವಾಝ್ ವಾಲ್ಪಾಡಿ ಅವರು ಗಾಯಕರಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಬಹುಮಾನ ವಿಜೇತ ತಂಡವನ್ನು ಮಸೀದಿ ಆಡಳಿತ ಕಮಿಟಿ ಹಾಗೂ ಮಕ್ಕಿ, ವಾಲ್ಪಾಡಿ ಖತೀಬರು ಹಾಗೂ ಮದರಸ ಅಧ್ಯಾಪಕರು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top